
ಇವತ್ತು ಸಿನಿಮಾ ಕ್ಷೇತ್ರದಿಂದ ತರುವ ಬದಲಾವಣೆಯಷ್ಟು ಸುಲಭವಾಗಿ ಬೇರೆ ಯಾವುದರಿಂದಲೂ ಸಾಧ್ಯವಿಲ್ಲ. ಇತಿಹಾಸವನ್ನು ಈ ಮೂಲಕ ತೋರಿಸಿದರೆ ಜನರಿಗೆ ಬಹಳ ಇಷ್ಟವಾಗುತ್ತದೆ ಹಾಗೂ ಅರ್ಥವಾಗುತ್ತದೆ ಕೂಡ. ಆದರೆ ಇಷ್ಟು ವರ್ಷವೂ ಕೂಡ ನಮ್ಮ ದೇಶದಲ್ಲಿ ಇತಿಹಾಸದ ದೃಷ್ಟಿಯಿಂದ ಸಿನಿಮಾಗಳು ಬಂದದ್ದು ಕಡಿಮೆ. ಇತ್ತೀಚೆಗೆ ಐದಾರು ಚಿತ್ರಗಳು ಇತಿಹಾಸದ ಸತ್ಯವನ್ನು ಹಾಗೂ ಕೆಲವು ಕರಾಳ ಮುಖವನ್ನು ತೋರಿಸಿದ್ದಾರೆ.

ಇದೇ ಉದ್ದೇಶದಿಂದ ಜಗತ್ತಿಗೆ ಸತ್ಯ ಸಂದೇಶವನ್ನು ಕೊಡಬೇಕು ಹಾಗೂ ರಾಜಕೀಯ ವ್ಯಕ್ತಿಗಳಿಗೆ ಈ ವಾಕ್ಯವನ್ನು ಮತ್ತಷ್ಟು ಮನದಟ್ಟು ಮಾಡಬೇಕು ಮಾತ್ರವಲ್ಲ ಆರ್ಥಿಕವಾಗಿ ಈ ಸಿನಿಮಾ ಜಗತ್ತಿನ ಮೂಲಕ ರಾಜ್ಯ ದೇಶ ಮತ್ತಷ್ಟು ಸುದೃಢವಾಗುತ್ತದೆ ಎನ್ನುವ ಉದ್ದೇಶದಿಂದ 1962ರಿಂದ ಈ ದಿವಸವನ್ನು ವಿಶ್ವ ಥಿಯೇಟರ್ ದಿನ ಎಂದು ಆಚರಿಸಲಾಗುತ್ತಿದೆ. ಭಾರತದಲ್ಲಿ ಹಿಂದುಗಳು ಅನುಭವಿಸಿದ ಕರಾಳ ಮುಖವನ್ನು ಮತ್ತಷ್ಟು ಜಗತ್ತಿನಲ್ಲೇ ತೋರಿಸುವ ಸಿನಿಮಾಗಳು ಬರಲಿ ಎಂದು ನಾವು ಆಶಿಸೋಣ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ