
ಇದು ಇಟಾಲಿಯ ಸಂಗೀತ ವಾದ್ಯ ವಿಶೇಷ. ಆ ಭಾಷೆಯಲ್ಲಿ ಮೃದು ಎಂಬ ಅರ್ಥದಲ್ಲಿ ಈ ಹೆಸರು ಪ್ರಯೋಗಿಸಲ್ಪಟ್ಟಿದೆ. ಅವರಿಗೆ ಇದರ ನಾದ ತುಂಬಾ ಮೃದುವಾಗಿ ಹಾಗೂ ಮನೋಹರವಾಗಿ ಅನುಭವಕ್ಕೆ ಬಂದಿರುವುದರಿಂದ ಈ ವಾದ್ಯಕ್ಕೆ ಬಹಳ ಮಹತ್ವವಿದೆ. ಬಾರ್ತಲೋಮ್ಯು ಕ್ರಿಷ್ಟೋಫರ್ ರವರು 1700 ರಲ್ಲಿ ಇದನ್ನು ಆವಿಷ್ಕರಿಸಿದರು ಎಂದು ಉಲ್ಲೇಖವಿದೆ. ಭಾರತದ ಹಾರ್ಮೋನಿಯಂತೆ ಕಾಣುವ ಇದು ಬಹಳ ದೊಡ್ಡದಾಗಿ ಹಾಗೂ ವಿಸ್ತಾರವಾದ ಕೀಲಿ ಮಣಿಗಳಿಂದ ಕೂಡಿದೆ. ಅದಕ್ಕೆ ಗೌರವದ ಉದ್ದೇಶದಿಂದ ಈ ದಿವಸವನ್ನು ಮೀಸಲಿಟ್ಟಿದ್ದಾರೆ.

ಭಾರತದ ಸಂಗೀತಕ್ಕೂ ಪಾಶ್ಚಾತ್ಯ ಸಂಗೀತಕ್ಕೂ ಇರುವ ದೊಡ್ಡ ವ್ಯತ್ಯಾಸ ಏನೆಂದರೆ ಈ ಪಿಯಾನೋ ಬಾರಿಸಲ್ಪಡುವುದು ಕುಣಿದು ತೇಲಾಡುವ ಪಾರ್ಟಿಗಳಲ್ಲಿ ಭಾರತದಲ್ಲಿ ಯಾವುದೇ ವಾದ್ಯಗಳು ಅಥವಾ ವಾದ್ಯ ಪರಿಕರಗಳು ಕೇವಲ ಮನೋರಂಜನೆಯ ಉದ್ದೇಶದಲ್ಲಿ ಇಲ್ಲ ಎನ್ನುವುದು ಗಮನಾರ್ಹ ಸಂಗತಿ.ಇಲ್ಲಿ ಸುಖಕ್ಕೂ ಹಾಗೂ ಗೌರವಕ್ಕೂ ಮಾತ್ರ ಇರುವುದಲ್ಲದೆ ಧಾರ್ಮಿಕ ಕಾರ್ಯಕ್ರಮಗಳಿಗೂ ಕೂಡ ಸಾಧಾರಣ ಎಲ್ಲಾ ಆದ್ಯ ವಿಶೇಷಗಳು ಅನ್ವಯವಾಗುತ್ತದೆ. ಹಾಗೂ ಭಕ್ತಿಯನ್ನು ಹಾಗೂ ಸಾತ್ವಿಕ ಚಿಂತನೆಯನ್ನು ಜಾಗೃತಗೊಳಿಸುತ್ತದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ