
ವಿಶ್ವ ಆರೋಗ್ಯ ದಿನ
ಎಷ್ಟೇ ಸಂಪತ್ತಿದ್ದರು ಕೂಡ ಆರೋಗ್ಯ ಇಲ್ಲದಿದ್ದರೆ ಆ ಸಂಪತ್ತಿಗೆ ಮಹತ್ವವೇ ಇಲ್ಲ. ಅಷ್ಟೇ ಅಲ್ಲದೆ ಆರೋಗ್ಯಕ್ಕಾಗಿ ಆ ಸಂಪತ್ತು ನೀರಿನ ಹಾಗೆ ಖರ್ಚಾಗಬಹುದು. ಆರೋಗ್ಯಕ್ಕೆ ಇರುವಷ್ಟು ಮಹತ್ವ ಮತ್ಯಾವುದಕ್ಕೂ ಇಲ್ಲ. ಬಹಳ ಆಶ್ಚರ್ಯವೆನಿಸಬಹುದು ಯಾವುದೇ ಜಾಗ್ರತೆ ಇಲ್ಲದ ಮಣ್ಣಿನಲ್ಲಿ ಬಿದ್ದು ಹೊರಳಾಡುವ ಮಕ್ಕಳು ಆರೋಗ್ಯವಂತರಾಗಿರುತ್ತಾರೆ. ಅದೇ ಎಸ್ ಸಿ ಕೋಣೆಯ ಒಳಗೆ ಬಹಳಷ್ಟು ಜಾಗ್ರತೆಯಾಗಿ ಕಾಪಾಡುವ ಮಕ್ಕಳು ಅನಾರೋಗ್ಯವಂತರಾಗಿರುತ್ತಾರೆ.

ಮಕ್ಕಳಿಗೆ ಮಾತ್ರ ಇದು ಅನ್ಭಯವಾಗುವುದಲ್ಲ ಎಲ್ಲಾ ಮನುಷ್ಯರಿಗೂ ಕೂಡ ಇದು ಅನ್ವಯವಾಗುತ್ತದೆ. ಇದಕ್ಕೆ ಭಾರತದ ದಾರ್ಶನಿಕರ ಉತ್ತರ ಜನ್ಮಾಂತರದ ಕರ್ಮ ಫಲ. ಯಾವುದನ್ನು ನಾವು ಅನುಭವಿಸಬೇಕು ಅದು ಅನುಭವಿಸಿಯೇ ತೀರಬೇಕು. ಆದ್ದರಿಂದ ಆರೋಗ್ಯಕ್ಕಾಗಿ ನಾವು ಈಗ ಪ್ರಯತ್ನಿಸುವುದಿಲ್ಲ ಜನ್ಮಂತರದ ಪ್ರಯತ್ನ. ಅದು ಸತ್ಕರ್ಮದಿಂದ ಸಾಧ್ಯ. ವಿಶ್ವ ಆರೋಗ್ಯದ ದಿನ ನಾವು ಈ ಚಿಂತನೆಯನ್ನು ನಡೆಸಬೇಕು.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ