
ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿ ಕಂಡುಬರುವ ಈ ಗೋಪುರ ಪ್ರಪಂಚಕ್ಕೆ ಒಂದು ಹೆಮ್ಮೆಯ ಸಂಗತಿಯಾಗಿದೆ. 1888 ರಲ್ಲಿ ಕಬ್ಬಿಣದಿಂದ ನಿರ್ಮಿಸಲ್ಪಟ್ಟಿರುವ ಈ ಗೋಪುರ ವಿಶ್ವದ ವಿಸ್ಮಯ. ಈ ಗೋಪುರ ನೂರು ವರ್ಷ ಕಳೆದರೂ ಕೂಡ ತನ್ನ ಮಹತ್ವವನ್ನು ಉಳಿಸಿಕೊಂಡಿದೆ ಎನ್ನುವ ಉದ್ದೇಶಕ್ಕಾಗಿ ಹಾಗೂ ಹೆಮ್ಮೆ ಗಾಗಿ ಈ ದಿವಸವನ್ನು ಮೀಸಲಿಟ್ಟಿದ್ದಾರೆ.ಅಲೆಕ್ಸಾಂಡರ್ ಗಸ್ಟಾವ್ ಐಫೆಲ್ ಎನ್ನುವ ಈ ಗೋಪುರವನ್ನು ನಿರ್ಮಿಸಿದ್ದಾನೆ ಈತನೇ ರೈಲು ಹಳಿ ಕೂಡ ಮೊತ್ತ ಮೊದಲ ನಿರ್ಮಿಸಿದ್ದು ಈತನೇ.

ಈತನ ವಿಚಾರದಲ್ಲಿ ಗಮನಾರ್ಹವಾದ ಒಂದು ಸಂಗತಿ ಇದೆ. ಆಕಾಲದ ಪ್ರಸಿದ್ಧ ಇಂಜಿನಿಯರ್ ಆಗಿದ್ದ ಈತ ಪಾಲಿಟೆಕ್ಟಿಕಲ್ ವಿಚಾರದಲ್ಲಿ ಫೇಲಾಗಿದ್ದ. ಆದರೂ ಕಠಿಣ ಪರಿಶ್ರಮ ಹಾಗೂ ಶ್ರದ್ಧೆ ಇದ್ದದ್ದರಿಂದ ಜೀವನದಲ್ಲಿ ಯಶಸ್ವಿಯಾಗಿ ಹೊಸ ಇತಿಹಾಸ ನಿರ್ಮಿಸಿದ. ವಿದ್ಯೆ ನಿಂತ ನೀರಲ್ಲ, ಶ್ರದ್ಧೆ ಹಾಗೂ ಆಸಕ್ತಿ ಇದ್ದರೆ ಅದು ಹರಿಯುತ್ತದೆ ಎಂದು ತೋರಿಸಿಕೊಟ್ಟವ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ