
ದೂರವಾಣಿ ದಿನ
ಜಗತ್ತಿನಲ್ಲಿ ಅತಿ ವೇಗವಾಗಿ ಬೆಳವಣಿಗೆಯನ್ನು ಪಡೆದ ಹಲವು ಸಾಧನಗಳಲ್ಲಿ ದೂರವಾಣಿ ಅಗ್ರಗಣ್ಯವಾಗಿದೆ. ಇವತ್ತು ಮೊಬೈಲ್ ಅದರ ಒಂದು ಅವಿಭಾಜ್ಯ ಅಂಗ. ಆದರೂ ಕೂಡ ಪ್ರಪಂಚದಲ್ಲಿ ಒಂಬೈನೂರು ಮಿಲಿಯನ್ ಗಿಂತಲೂ ಹೆಚ್ಚು ಲ್ಯಾಂಡ್ ಲೈನ್ ಫೋನುಗಳು ಉಪಯೋಗಿಸಲ್ಪಡುತ್ತಿದೆ ಎನ್ನುವುದೇ ಆಶ್ಚರ್ಯದ ಸಂಗತಿ. ಆದರೆ ಮೊಬೈಲ್ ಅಂತೂ ಇಲ್ಲದವರಿಲ್ಲ ಅಷ್ಟರಮಟ್ಟಿಗೆ ಮೊಬೈಲ್ ವ್ಯಾಪಿಸಿ ನಿಂತಿದೆ. ಈ ಸಾಧನವನ್ನು 1876 ರಲ್ಲಿ ಮೊತ್ತ ಮೊದಲು ಕಂಡು ಹಿಡಿದವರು ಅಲೆಕ್ಸಾಂಡರ್ ಗ್ರಹಾಂ ಬೆಲ್. ಅದಕ್ಕಿಂತಲೂ ಮುಂಚೆಯೇ ಇದನ್ನು ಕಂಡುಹಿಡಿದಾಗಿತ್ತು ಆದರೆ ಇದರ ಪೇಟೆಂಟನ್ನು ಅವರು ಪಡೆದುಕೊಂಡದ್ದು ಈ ಸಂದರ್ಭದಲ್ಲಿ.

ಆದ್ದರಿಂದ 1876ರ ಮೇ 10 ರಂದು ಫೆಲಡೆಲ್ಫಿಯಾದಲ್ಲಿ ನಡೆಯುತ್ತಿದ್ದ ವಿಶ್ವ ಸಮ್ಮೇಳನದ ಭವ್ಯ ರಂಗಮಂಟಪದಲ್ಲಿ ಕಿಕ್ ಇರದ ಜನತೋಮದ ನಡುವೆ ಸಣ್ಣ ತಂತಿಯ ಮೂಲಕ ನಮ್ಮ ಮಾತು ಹರಿದು ಬಂದು ಜನರಿಗೆ ಕೇಳುವ ಬಗೆಯನ್ನು ತೋರಿಸಿಕೊಟ್ಟರು. ಅಲ್ಲಿಂದ ಸರಿಯಾಗಿ ಒಂದು ವರ್ಷದ ನಂತರ ಶ್ವೇತಭವನದಲ್ಲಿ ಮೊತ್ತಮೊದಲಿಗೆ ದೂರವಾಣಿಯನ್ನು ಇಡಲ್ಪಟ್ಟಿತು. ನಂತರ ಇತ್ತೀಚೆಗೆ 1983ರಲ್ಲಿ ಅದೇ ತಂತ್ರಜ್ಞಾನದ ಮುಂದುವರಿದ ಭಾಗವಾಗಿ ಮೂಲಕ ಮೊಬೈಲ್ ಮೊತ್ತ ಮೊದಲಿಗೆ ಹೊರಬಂತು. ಅದಾಗಿ ಸ್ವಲ್ಪ ಸಮಯದ ನಂತರ ೧೮೮೨ ರಲ್ಲಿ ಭಾರತದಲ್ಲಿಯೂ ಕೂಡ ಮೊತ್ತ ಮೊದಲಿಗೆ ದೂರವಾಣಿ ಸಂಪರ್ಕ ಒದಗಿತು.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ