ದಿನ ವಿಶೇಷ – ಸುಮಿತ್ರಾನಂದನ್ ಪಂತ್

Date:

spot_img

ಸುಮಿತ್ರಾನಂದನ್ ಪಂತ್

ಹಿಂದಿ ಭಾಷೆಯ ಸಾಹಿತ್ಯ ಚರಿತ್ರೆಯಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮಹಾ ಕವಿ ಸುಮಿತ್ರಾನಂದನ್ ಪಂತ್. 1900 ಮೇ 20ರಂದು ಈಗಿನ ಉತ್ತರಾಖಂಡ ರಾಜ್ಯದ ಕೌಸಾನಿ ಎಂಬ ಜಿಲ್ಲೆಯಲ್ಲಿ ಹುಟ್ಟಿದರು. ತನ್ನ ಕಾಲೇಜ್ ವಿದ್ಯಾಭ್ಯಾಸದ ಸಮಯದಲ್ಲಿ ಸರೋಜಿನಿ ನಾಯ್ಡು ಹಾಗೂ ರವೀಂದ್ರನಾಥ ಟ್ಯಾಗೋರ್ ಇವರಿಂದ ಬಹಳ ಪ್ರಭಾವಿತರಾಗಿ ಕಾವ್ಯ ಲೋಕಕ್ಕೆ ಕಾಲಿಟ್ಟರು. ಭಾರತದ ಪ್ರಾಕೃತಿಕವಾದ ಸೌಂದರ್ಯ ಹಾಗೂ ಗ್ರಾಮೀಣ ಪ್ರದೇಶದ ಮೇಲೆ ಬಹಳಷ್ಟು ಅಭಿಮಾನ ಹೊಂದಿದ್ದ ಇವರು, ತನ್ನ ಕೃತಿಗಳಲ್ಲಿ ಇದರ ಕುರಿತಾಗಿ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದರು.

9 ವರ್ಷಗಳಷ್ಟು ಕಾಲ ಪ್ರಕೃತಿಯೊಂದಿಗೆ ಏಕಾಂತ ಜೀವನವನ್ನು ಸನ್ಯಾಸಿಯಂತೆ ಕಳೆದವರು. ನಂತರ ಗಾಂಧಿಯ ಚಿಂತನೆಗಳಿಗೆ ತನ್ನನ್ನು ಸಮರ್ಪಿಸಿಕೊಂಡು ಕೊನೆಗೆ ಅರವಿಂದ ಘೋಷರ ಶಿಷ್ಯನಾಗಿ ಪಾಂಡಿಚೆರಿಯ ಅವರ ಆಶ್ರಮದಲ್ಲಿ ಬಹಳಷ್ಟು ಕಾಲ ತಂಗಿದ್ದರು. ಸುಮಾರು 28 ಸ್ವಂತ ಕೃತಿಗಳನ್ನು ಬರೆದ ಇವರು 1968ರಲ್ಲಿ ಚಿದಂಬರ ಎನ್ನುವ ಕವನ ಸಂಕಲಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡರು. ಇದಲ್ಲದೆ ಪದ್ಮಭೂಷಣ ಇತ್ಯಾದಿ ಅನೇಕ ಮಹಾಪ್ರಶಸ್ತಿಗಳನ್ನು ಪಡೆದುಕೊಂಡವರು. ತನ್ನ ಕೊನೆಯ ವರ್ಷಗಳನ್ನು ಪ್ರಯಾಗರಾಜದಲ್ಲಿ ಕಳೆದ ಇವರು 1977 ಡಿಸೆಂಬರ್ 28ರಂದು ಇಹಲೋಕ ತ್ಯಜಿಸಿದರು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ತೈಲ ಬೆಲೆ ಭಾರಿ ಏರಿಕೆ: ಇರಾನ್ ಅಮೆರಿಕ ಸಂಘರ್ಷದ ಪ್ರಭಾವ

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕಚ್ಚಾ ತೈಲ ದರದಲ್ಲಿ ಭಾರಿ ಏರಿಕೆ ಕಂಡಿದೆ. ಭಾರತಕ್ಕೆ ಇಂಧನ ಬಿಕ್ಕಟ್ಟಿನ ಭೀತಿ ಎದುರಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಕ್ರಮ: ದೆಹಲಿಯಲ್ಲಿ ಬೃಹತ್ ಪ್ರತಿಭಟನೆ, ರಾಹುಲ್ ಗಾಂಧಿಗೆ ಗಾಯ

ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯಲ್ಲಿ ಪ್ರತಿಪಕ್ಷಗಳ ಬೃಹತ್ ಪ್ರತಿಭಟನೆ. ರಾಹುಲ್ ಗಾಂಧಿಗೆ ಗಾಯ, ಹಲವು ನಾಯಕರ ವಶ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಗೃಹಲಕ್ಷ್ಮಿ ಹಣ ಬರದೆ ಬೇಸತ್ತ ಪತಿ ಪ್ರತಿಭಟನೆ: ಸಿಎಂಗೆ ಪತ್ರ

ಗೃಹಲಕ್ಷ್ಮಿ ಯೋಜನೆ ಹಣ ಜಮೆಯಾಗದೆ ಕೊಪ್ಪಳದಲ್ಲಿ ಪತಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಮಿತಾಬ್ ಬಚ್ಚನ್ ಆರೋಗ್ಯ ಕುರಿತ ವದಂತಿಗಳಿಗೆ ತೆರೆ! ಬಿಗ್ ಬಿ ಸ್ಪಷ್ಟನೆ

ಅಮಿತಾಬ್ ಬಚ್ಚನ್ ಅವರ ಆರೋಗ್ಯದ ಕುರಿತು ಹಬ್ಬಿದ್ದ ಶಸ್ತ್ರಚಿಕಿತ್ಸೆಯ ವದಂತಿಗಳಿಗೆ ನಟ ಸ್ವತಃ ತೆರೆ ಎಳೆದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.