spot_img

ದಿನ ವಿಶೇಷ – ಶಂಕರ ಜಯಂತಿ ರಾಮಾನುಜ ಜಯಂತಿ

Date:

ಶಂಕರ ಜಯಂತಿ ರಾಮಾನುಜ ಜಯಂತಿ

ಭಾರತ ಕಾಲಕಾಲಕ್ಕೆ ಬದಲಾವಣೆಯನ್ನು ಪಡೆದುಕೊಂಡು ಸಾಗುವ ದೇಶ. ಈ ಬದಲಾವಣೆ ತರುವವರನ್ನು ಆಚಾರ್ಯರು ಎಂದು ಗುರುತಿಸುತ್ತದೆ. ಅಂತಹ ಆಚಾರ್ಯರಲ್ಲಿ ಮೊದಲಿಗರಾಗಿ ಶಂಕರರು ಹಾಗೂ ಎರಡನೇಯವರಾಗಿ ರಾಮಾನುಜರು ಗುರುತಿಸಲ್ಪಡುತ್ತಾರೆ. ಇಬ್ಬರ ಜಯಂತಿಯೂ ಕೂಡ ಇವತ್ತೇಯಾಗಿದೆ. ಭಾರತವನ್ನು ಹಾಗೂ ಸನಾತನ ಧರ್ಮವನ್ನು ಮೊತ್ತ ಮೊದಲು ಪರಕೀಯರಿಂದ ರಕ್ಷಿಸಿದವರು ಶಂಕರಾಚಾರ್ಯರು. ಅಷ್ಟೇ ಅಲ್ಲದೆ ಭಾರತದ ಉದ್ದಗಲಕ್ಕೂ ಸಂಚರಿಸಿ ಹಲವಾರು ತೀರ್ಥಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಿದವರು. ಭಾರತಕ್ಕೆ ಅದ್ವೈತ ಎನ್ನುವ ಹೊಸ ತತ್ವವನ್ನು ತೋರಿಸಿಕೊಟ್ಟರು. ಸನಾತನ ಧರ್ಮದ ಎಲ್ಲಾ ದೇವತೆಗಳಿಗೂ ಪ್ರಾಧಾನ್ಯತೆಯನ್ನು ಕೊಟ್ಟು ಆರಾಧನೆಗೆ ಬಹಳ ಮಹತ್ವವನ್ನು ಕೊಟ್ಟರು.

ತನ್ನ 32 ವರ್ಷದ ಅಲ್ಪಾಯುಷ್ಯದಲ್ಲಿಯೇ ಅದ್ಭುತ ಸಾಧನೆ ತೋರಿದವರು.
ಅನಂತರದಲ್ಲಿ ಬಂದ ರಾಮಾನುಜರು ವಿಷ್ಣುವಿನ ಪಾರಮ್ಯವನ್ನು ಹೇಳುವುದರೊಂದಿಗೆ ಹಲವಾರು ವೈಷ್ಣವ ಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಿದರು. ದೇಶದಲ್ಲಿ ಇವತ್ತು ಕಾಣುವ ಜಾತೀಯತೆಯ ವಿರುದ್ಧದ ಯಾವ ಹೋರಾಟವಿದೆಯೋ ಅದನ್ನು ಆ ಕಾಲದಲ್ಲಿ ಮಾಡಿದವರು ರಾಮಾನುಜರು. ಸುಮಾರು 120 ವರ್ಷಗಳ ಸುದೀರ್ಘ ಜೀವನವನ್ನು ನಡೆಸಿ ಇವತ್ತಿಗೂ ದೇಹ ರೂಪದಲ್ಲಿ ಶ್ರೀರಂಗದಲ್ಲಿದ್ದಾರೆ ಎಂದುವ ನಂಬಿಕೆ ಇದೆ. ಈ ದೇಶದ ವಿಶಿಷ್ಟತೆ ಇದೇಯಾಗಿದೆ. ಯಾವ ಕಾಲಕ್ಕೆ ಧರ್ಮಚ್ಯುತಿಯಾಗುವ ಸಂದರ್ಭ ಬರುತ್ತದೆಯೋ ಆವಾಗಲೆಲ್ಲ ಆಚಾರ್ಯರು ಹುಟ್ಟಿ ಬರುತ್ತಾರೆ. ಈಗವು ಕೂಡ ಹಿಂದೂ ಎಂದರೆ ಸಾಯುವ ಸಂದರ್ಭದಲ್ಲಿದ್ದೇವೆ. ದಿವ್ಯ ಶಕ್ತಿಗಳು ಆಚಾರ್ಯ ರೂಪದಲ್ಲಿ ಹುಟ್ಟಿ ಬರಬೇಕು ಎನ್ನುವ ಪ್ರಾರ್ಥನೆ ಮಾಡೋಣ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹರಿವೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು: ರೋಗ ನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆಗೆ ಉತ್ತಮ

ಕೆಂಪು ಎಲೆಗಳಿಂದ ಕೂಡಿದ ಹರಿವೆ ಸೊಪ್ಪು (Amaranth Leaves) ಆರೋಗ್ಯದ ದೃಷ್ಟಿಯಿಂದ ಅಮೂಲ್ಯವಾದ ಪೋಷಕಾಂಶಗಳನ್ನು ಹೊಂದಿದೆ

ಭಾರತದಲ್ಲಿ ಪಾಕಿಸ್ತಾನ ಸೆಲೆಬ್ರಿಟಿಗಳ INSTAGRAM ಅಕೌಂಟ್ ಗಳು ಬ್ಯಾನ್

ಭಾರತದಲ್ಲಿ ಇನ್ಸ್ಟಾಗ್ರಾಮ್ ಹಲವಾರು ಪಾಕಿಸ್ತಾನಿ ಸಾಮಾಜಿಕ ಮಾಧ್ಯಮ ಪ್ರಭಾವಶಾಲಿಗಳು ಮತ್ತು ಸೆಲೆಬ್ರಿಟಿಗಳ ಅಕೌಂಟ್ಗಳನ್ನು ಬ್ಲಾಕ್ ಮಾಡಿದೆ

ದಿನ ವಿಶೇಷ – ಗಂಗೋತ್ಪತ್ತಿ

ಭಗೀರಥನ ಪ್ರಯತ್ನಕ್ಕೆ ಜೇಬಲೋಕದಿಂದ ಗಂಗಾ ಮಾತೆ ಧರೆಗೆಳಿದು ಬಂದ ದಿವಸ

11 ವರ್ಷಗಳ ನಂತರ ಮೋದಿ ಸರಕಾರಕ್ಕೆ ಅರಿವಾಯಿತು!” – ರಾಹುಲ್ ಗಾಂಧಿ ಜಾತಿ ಜನಗಣತಿಗೆ ಪ್ರತಿಕ್ರಿಯೆ

ಕೇಂದ್ರ ಸರಕಾರವು ರಾಷ್ಟ್ರೀಯ ಜನಗಣತಿಯಲ್ಲಿ ಜಾತಿ ಜನಗಣತಿ ನಡೆಸಲು ನಿರ್ಧರಿಸಿದ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರತಿಕ್ರಿಯಿಸಿದ್ದಾರೆ.