
ಅಮಾವಾಸ್ಯೆ ಹಿಂದುಗಳಲ್ಲಿ ಪಿತೃಗಳ ಅನುಗ್ರಹಕ್ಕೆ ಕಾರಣವಾದ ದಿನವಾಗಿದೆ. ಅದರಲ್ಲೂ ನಮ್ಮ ಗ್ರಹಚಾರಗಳನ್ನು ದೂರ ಮಾಡಿಕೊಂಡು ಬನ್ನಿ ಎಂದು ಮಾಡುವ ಸತ್ಕರ್ಮಗಳು ಬಹಳ ಪ್ರಾಧಾನ್ಯತೆಯನ್ನು ಕೊಡುತ್ತದೆ. ಆದ್ದರಿಂದ ಪ್ರತಿ ಅಮಾವಾಸ್ಯೆ ಕೂಡ ಅದರದ್ದೆ ಆದ ವಿಶೇಷತೆಗಳನ್ನು ಹೊಂದಿದೆ. ಇವತ್ತು ಶನಿವಾರ ಅಮಾವಾಸ್ಯೆ ಬಂದ ಕಾರಣ ಶನಿ ಅಮಾವಾಸ್ಯೆ ಎಂದು ಕರೆಯಿಸಿಕೊಳ್ಳುತ್ತದೆ.

ಶನಿವಾರ ಸೋಮವಾರ ಹಾಗೂ ಮಂಗಳವಾರ ಮೂರು ದಿವಸ ಬರುವ ಅಮಾವಾಸ್ಯೆ ಬಹಳ ವಿಶೇಷವಾಗಿದ್ದು ಈ ದಿವಸ ನಾವು ದೇವರ ದರ್ಶನವನ್ನು ಮಾಡುವುದು ದೇವತಾ ಆರಾಧನೆಯನ್ನು ಮಾಡುವುದು ಬಹಳ ಫಲಕಾರಿಯಾಗಬಲ್ಲದು ಹಾಗೂ ಪಾಪನಾಶಕವಾಗಿದೆ. ಅದರಲ್ಲೂ ಶನೈಶ್ಚರ ಮಂದಿರದಲ್ಲಿ ಈ ದಿವಸ ಬಹಳ ವಿಶೇಷವಾಗಿ ಆರಾಧನೆಗಳು ನಡೆಯುತ್ತದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ