
ರವೀಂದ್ರನಾಥ ಟ್ಯಾಗೋರ್
1861 ಮೇ 7ರಂದು ಕಲ್ಕತ್ತಾದ ಪಿರಾಲಿ ಎಂಬ ಬ್ರಾಹ್ಮಣ ಕುಟುಂಬವೊಂದರಲ್ಲಿ ದೇವೇಂದ್ರ ಹಾಗೂ ಶಾರದಾ ಎನ್ನುವ ದಂಪತಿಗಳಿಂದ ಈ ಮಹಾ ಕವಿಯ ಜನನವಾಯಿತು.ಅವರು ಬಂಗಾಳಿ ಮಹಾ ವಿದ್ವಾಂಸ. ಕವಿಗಳಾಗಿ, ಕಾದಂಬರಿಕಾರರಾಗಿ, ಸಂಗೀತಕಾರರಾಗಿ ಮತ್ತು ನಾಟಕ ರಚಿಸುವ ಮೂಲಕ ಅವರು ೧೯ನೇ ಶತಮಾನದ ಕೊನೆಯಲ್ಲಿ ಮತ್ತು ೨೦ನೇ ಶತಮಾನದ ಆರಂಭದಲ್ಲಿ ಬಂಗಾಳಿ ಸಾಹಿತ್ಯ ಮತ್ತು ಸಂಗೀತಕ್ಕೆ ಹೊಸ ರೂಪ ಕೊಟ್ಟರು. ಅವರು ರಚಿಸಿದ ಸೂಕ್ಷ್ಮ ಸಂವೇದನೆಯ, ನವನವೀನವೂ ಮತ್ತು ಸುಂದರವೂ ಆದ ಪದ್ಯಗುಚ್ಛವಾದ “ಗೀತಾಂಜಲಿ” ಕಾವ್ಯಕ್ಕೆ ೧೯೧೩ರ ನೊಬೆಲ್ ಸಾಹಿತ್ಯ ಪ್ರಶಸ್ತಿದಕ್ಕಿತು.

ಈ ಮೂಲಕ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಏಷ್ಯಾದ ಮೊದಲಿಗರು ಎಂಬ ಗೌರವಕ್ಕೆ ಪಾತ್ರರಾದರು. ಇವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಕೂಡ ಗುರುತಿಸಿಕೊಂಡಿದ್ದರು. ಬ್ರಿಟಿಷರನ್ನು ನೇರವಾಗಿ ಖಂಡಿಸುತ್ತಿದ್ದರು. ಹಾಗೂ ಹಿಂದುಗಳ ಜಾತಿ ಪದ್ಧತಿಯನ್ನು ವಿರೋಧಿಸುತ್ತಿದ್ದರು. ದೇವಸ್ಥಾನದ ಪ್ರವೇಶದ ಬಗ್ಗೆ ಹಲವಾರು ಹೋರಾಟಗಳನ್ನು ಮಾಡಿದ್ದರು. ಇವರ ಕಾಲದಲ್ಲಿ ಇವರ ಹೋರಾಟದಿಂದಲೇ ಗುರುವಾಯುರು ದೇವಸ್ಥಾನಕ್ಕೆ ದಲಿತರ ಪ್ರವೇಶವಾದದ್ದು. ಭಾರತಕ್ಕೆ ರಾಷ್ಟ್ರಗೀತೆಯನ್ನು ಸಮರ್ಪಿಸುವ ಮೂಲಕ ಭಾರತದ ಇತಿಹಾಸದಲ್ಲಿ ಅಜಾರಾಮರರಾಗಿದ್ದಾರೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ