
ಪೊಹೆಲಾ ಬೋಯಿಶಾಖ್
ಈ ದಿವಸ ಪಶ್ಚಿಮ ಬಂಗಾಳ, ತ್ರಿಪುರಾ, ಜಾರ್ಖಂಡ್ ಮತ್ತು ಅಸ್ಸಾಂ (ಬರಾಕ್ ಕಣಿವೆ) ಗಳಲ್ಲಿ ಏಪ್ರಿಲ್ 15 ರಂದು ಚಂದ್ರಸೌರ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ದಿನವಾಗಿ ಆಚರಿಸಲಾಗುತ್ತದೆ. ಬಂಗಾಳಿ ವ್ಯವಹಾರ ವರ್ಗವು ತನ್ನ ಹಣಕಾಸು ವರ್ಷವನ್ನು ಸಹ ಈ ದಿನದಂದು ಪ್ರಾರಂಭಿಸುತ್ತದೆ. ಈ ದೇಶದ ಸಂಸ್ಕೃತಿ ಹೇಗೆ ಒಂದಕ್ಕೆ ಒಂದು ಬೆಸೆದು ಕೊಂಡಿದೆ ಎನ್ನುವುದಕ್ಕೆ ಬೇಕಾದಷ್ಟು ಸಾಕ್ಷಿಗಳೊಂದಿಗೆ ಇದು ಕೂಡ ಗಮನೀಯವಾದದ್ದು.

ಹಿಂದಿಯಲ್ಲಿ ಪೆಹಲಾ ಎಂದರೆ ಮೊದಲು ಎಂದು ಅರ್ಥ ಹಾಗೆಯೇ ಸಂಸ್ಕೃತದ ವೈಶಾಖ ಅಪಬ್ರ0ಶವಾಗಿ ಬೋಯಿಶಾಖ್ ಎಂದಾಗಿದೆ. ಆದ್ದರಿಂದ ವೈಶಾಖ ಮಾಸದ ಮೊದಲ ದಿವಸ ಎನ್ನುವುದು ಈ ಶಬ್ದದ ಹಿಂದಿರುವ ಅರ್ಥ. ಬಾಂಗ್ಲಾದೇಶ ಕೂಡ ಈ ದೇಶದ ಭಾಗವಾದ್ದರಿಂದ ಈ ದಿವಸವನ್ನು ವಿಶೇಷವಾಗಿ ಆಚರಿಸುತ್ತಾರೆ. ನಮ್ಮಲ್ಲಿ ಮೇಲೆ ಹೇಳಿದ ರಾಜ್ಯಗಳಲ್ಲಿ ನಮ್ಮ ಯುಗಾದಿಯ ವಾತಾವರಣ ಕಂಡುಬರುತ್ತದೆ. ನಮ್ಮ ದೇಶದ ಹೊಸ ವರ್ಷದ ದಿನಗಳು ಹೇಗೆ ಪ್ರಕೃತಿಗೆ ಪೂರಕವಾಗಿದೆ ಎನ್ನುವುದಕ್ಕೆ ಇದು ಒಂದು ಉದಾಹರಣೆಯಷ್ಟೇ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ