
ರಾಷ್ಟ್ರೀಯ ವ್ಯಾಯಾಮ ದಿನ
ಯಾವ ವ್ಯಕ್ತಿ ದಿನದಲ್ಲಿ ಸ್ವಲ್ಪವೂ ಕೂಡ ವ್ಯಾಯಾಮ ಮಾಡುವುದಿಲ್ಲವೋ ಆತನಲ್ಲಿ ಉದಾಸೀನ ಮನೆ ಮಾಡಿರುತ್ತದೆ. ಅಷ್ಟೇ ಅಲ್ಲದೆ ತಿಂದ ಆಹಾರ ಕರಗದೆ ಕೊಬ್ಬು ಜಾಸ್ತಿಯಾಗಿ ಆರೋಗ್ಯ ಕೂಡ ಕೆಡುವುದರಲ್ಲಿ ಸಂಶಯವೇ ಇಲ್ಲ. ಅದರಲ್ಲಂತೂ ಇವತ್ತಿನ ಆಹಾರಗಳು ಬಹಳ ಬೇಗನೆ ಕೊಬ್ಬುಗಳನ್ನು ತರುತ್ತದೆ. ಅಂತದ್ದರಲ್ಲಿ ಎಷ್ಟು ನಡೆಯುತ್ತೇವೆಯೋ ವ್ಯಾಯಾಮ ಮಾಡುತ್ತೇವೆಯೋ ಅಷ್ಟು ಆರೋಗ್ಯವಾಗಿರಬಹುದು. ಆ ಒಂದು ಉದ್ದೇಶದಿಂದ ಇವತ್ತಿನ ದಿನ ಮಟ್ಟದಲ್ಲಿ ವ್ಯಾಯಾಮದ ದಿವಸ ಎನ್ನುವ ಮೂಲಕ ವ್ಯಾಯಾಮದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಇದರ ಉದ್ದೇಶವಾಗಿದೆ.

ಇತ್ತೀಚೆಗಿನ ತನಕವೂ ಕೂಡ ನಮ್ಮ ಮನೆಯ ಎಲ್ಲಾ ಕೆಲಸಗಳನ್ನು ಸ್ವಯಂ ನಾವೇ ಮಾಡುವ ಪರಿಪಾಠವಿತ್ತು. ಉದಾಹರಣೆಗೆ ನೆಲ ಒರೆಸುವುದು ಬಟ್ಟೆ ಒಗೆಯುವುದು, ಬೇಕಾದ ಸಾಮಾನುಗಳನ್ನು ತರುವುದು ಇತ್ಯಾದಿ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದ ಕಾಲ ಈಗ ಬದಲಾಗಿದೆ. ಎಲ್ಲದ್ದಕ್ಕೂ ಅದರದ್ದೆಯಾದ ಯಂತ್ರಗಳು ಹುಟ್ಟಿಕೊಂಡಿವೆ. ಆ ಮೂಲಕ ಮನೆಯ ಯಾವ ಕೆಲಸಗಳು ಕೂಡ ಮಾಡದೆ ಬೆಳೆಯುತ್ತಿದ್ದೇವೆ. ಆ ಕಾರಣದಿಂದಲೇ ವ್ಯಾಯಾಮಕ್ಕೆ ಇತ್ತು ಮಹತ್ವವಿರುವುದು. ಒಂದು ವೇಳೆ ನಮ್ಮ ಕೆಲಸಗಳನ್ನು ನಾವೇ ಮಾಡುವುದಿದ್ದರೆ ಇದಕ್ಕಿಂತ ದೊಡ್ಡ ವ್ಯಾಯಾಮ ಬೇರಿಲ್ಲ. ಅದಿಲ್ಲದೆ ಇರುವುದರಿಂದ ಕನಿಷ್ಠ ಪಕ್ಷ ವ್ಯಾಯಾಮವಲ್ಲದಿದ್ದರೆ ನಡೆಯುವುದನ್ನು ರೂಢಿಸಿಕೊಳ್ಳುವುದು ಉತ್ತಮ ಆರೋಗ್ಯಕ್ಕೆ ಮೊದಲ ಮೆಟ್ಟಿಲು.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ