
ರಾಷ್ಟ್ರೀಯ ಭೂ ದಿನ
ಭೂಮಿಯನ್ನು ಪ್ರೀತಿಸದೆ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಭೂಮಿಯನ್ನು ಹಾಗೂ ಪರಿಸರವನ್ನು ಪ್ರೀತಿಸಬೇಕು ಎನ್ನುವ ಉದ್ದೇಶದಿಂದ ಪಾಶ್ಚಾತ್ಯರು ಈ ದಿನವನ್ನು ಭೂಮಿಯ ನೆನಪಿನಲ್ಲಿ ಸೀಮಿತವಾಗಿಸಿದ್ದಾರೆ. ನಮ್ಮ ಸ್ವಾರ್ಥಕ್ಕಾಗಿ ಭೂಮಿಯನ್ನು ಉಪಯೋಗಿಸಿಕೊಳ್ಳುವಾಗ ಹಾಗೂ ವಿಪರೀತ ವಾಯು ಮಾಲಿನ್ಯಗಳನ್ನು ಉಂಟು ಮಾಡುವಾಗ ಬಹಳ ಜಾಗೃತೆ ಅಗತ್ಯ ಹಾಗೂ ಇದರ ದೊಡ್ಡ ನಷ್ಟವನ್ನು ಅನುಭವಿಸುವುದು ಮುಂದೇ ನಾವೇ ಎನ್ನುವ ಸಂದೇಶವನ್ನು ಸಾರುವುದಕ್ಕಾಗಿ ಈ ದಿನವನ್ನು 1970ರಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ತೀರ್ಮಾನಿಸಿದೆ. ಇವತ್ತಿಗೆ 193 ದೇಶಗಳು ಈ ದಿವಸವನ್ನು ಈ ರೀತಿಯಾಗಿ ಆಚರಿಸುತ್ತವೆ.

ಆದರೆ ಭಾರತೀಯರು ಸಾವಿರಾರು ವರ್ಷಗಳಿಂದಲೂ ತಾಯಿಯ ಅನಂತರದಲ್ಲಿ ಭೂಮಿಯನ್ನು ತಾಯಿಯ ಹಾಗೆ ಕಂಡವರು. ಅದಕ್ಕೆ ತಾನೇ ನಮಗೆ ಭಾರತ ಒಂದು ಭೂಮಿಯ ತುಂಡಲ್ಲ. ನಮ್ಮ ತಾಯಿ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ