
ನರಸಿಂಹ ಜಯಂತಿ
ಉಗ್ರಂ ವೀರಂ ಮಹಾ-ವಿಷ್ಣುಂ
ಜ್ವಲಂತಂ ಸರ್ವತೋ ಮುಖಮ್
ನೃಸಿಂಹಂ ಭೀಷಣಂ ಭದ್ರಂ
ಮೃತ್ಯು0 ಮೃತ್ಯುಂ ನಮಾಮ್ಯಹಮ್ ॥
ಹಿರಣ್ಯಕಶ್ಯಪುವಿನ ಅಹಂಕಾರವನ್ನು ಸಂಹಾರ ಮಾಡಲು ಉದಿಸಿ ಬಂದ ಭಗವಂತನ ದಿವ್ಯ ರೂಪ ನರಸಿಂಹ ರೂಪ. ತನಗೆ ಮರಣ ಬರಲೇಬಾರದು ಎನ್ನುವ ಉದ್ದೇಶದಿಂದ ಹಲವಾರು ವರಗಳನ್ನು ಸೇರಿಸಿ ಮರಣ ಬಾರದಂತಹ ವರವನ್ನು ಪಡೆದುಕೊಂಡವ ಹಿರಣ್ಯಕಶ್ಯಪು. ಅದನ್ನು ಭೇದಿಸಿ ಆತನಿಗೆ ಮರಣವನ್ನು ತರುವ ಮೂಲಕ ದೇವತೆಗಳ ವರವನ್ನು ಸಾಧ್ಯವಾಗಿಸಿದ ದಿವ್ಯಮೂರ್ತಿ ನರಸಿಂಹ ರೂಪ. ಅಹಂಕಾರಕ್ಕೆ ಕೊನೆ ಇರುತ್ತದೆ ಎನ್ನುವುದನ್ನು ತೋರಿಸಿದ್ದಲ್ಲದೆ ಭಗವಂತನ ಸಂಕಲ್ಪಕ್ಕೆ ಅಭೇಧ್ಯವಾದದ್ದು ಯಾವುದು ಇಲ್ಲ ಎಂದು ಕೂಡ ಜಗತ್ತಿಗೆ ತೋರಿಸಿಕೊಟ್ಟ. ಶತ್ರು ಸಂಹಾರಕ್ಕೆ ನರಸಿಂಹ ರೂಪದಷ್ಟು ಪ್ರಖರವಾದ ಮತ್ತೊಂದು ರೂಪವಿಲ್ಲ.

ಉಗ್ರತೆಯ ಹಾಗೂ ಜ್ವಲಿಸುವ ಅಗ್ನಿಗೆ ಸಮಾನವಾದ, ಶತ್ರುಗಳಿಗೆ ಭೀಕರವಾದ ಭಯಂಕರವಾದ ರೂಪ ನರಸಿಂಹ ರೂಪ. ಅಂತಹಾ ನರಸಿಂಹ ರೂಪ ಪ್ರಾದುರ್ಭವಿಸಿದ ದಿನ, ಇವತ್ತು ನರಸಿಂಹ ಜಯಂತಿ. ಈಗ ಭಾರತವು ಕೂಡ ಶತ್ರುಗಳ ಕಾಟಕ್ಕೆ ಬಲಿಯಾಗಿದೆ.ಇಲ್ಲಿ ಆಂತರಿಕ ಶತ್ರುಗಳು ಹಾಗೂ ಬಾಹ್ಯದಲ್ಲೂ ಶತ್ರುಗಳು ತುಂಬಿ ತುಳುಕಾಡುತ್ತಿದ್ದಾರೆ. ಅಂತಹ ಶತ್ರುಗಳು ನರಸಿಂಹ ಸ್ಮರಣೆ ಮಾತ್ರದಿಂದಲಿ ನಾಶವಾಗಬೇಕು. ಈ ದೇಶಕ್ಕೆ ಈ ದೇಶದ ಸಂಸ್ಕೃತಿಗೆ ಈ ದೇಶದ ಸ್ವಾಭಿಮಾನಕ್ಕೆ ಧಕ್ಕೆ ತರುವ ಎಲ್ಲಾ ಮತಾಂಧ ಜಿಹಾದಿಗಳು ಕೂಡ ನರಸಿಂಹನ ಮೂರನೇ ಕಣ್ಣಿಗೆ ಪ್ರಸ್ತವಾಗಬೇಕು ಎಂದು ನಾವೆಲ್ಲರೂ ಒಕ್ಕೊರೊಳಿನಿಂದ ಪ್ರಾರ್ಥಿಸೋಣ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ