
ಮಹಾರಾಜ ಕರ್ಣಿ ಸಿಂಗ್
ಬಿಕನೆರ್ ನ ರಾಜ ವಂಶಸ್ಥ ಮಹಾರಾಜ ಸಾಧುಲ್ ಸಿಂಗ್ ದಂಪತಿಗಳಿಗೆ 1924 ಎಪ್ರಿಲ್ 21ರಂದು ಕರ್ನಿ ಸಿಂಗ್ ಜನಿಸಿದರು. ಆ ವಂಶದ ಕುಲದೇವತೆಯ ಹೆಸರು ಕರ್ನಿ ಎಂದು. ಅದೇ ಹೆಸರನ್ನು ಈ ಮಗುವಿಗೆ ಇಡಲಾಯಿತು. ಆ ರಾಜವಂಶದ ಕೊನೆಯ ಅರಸನಾಗಿ 1950 ರಿಂದ 70ರ ತನಕ ಆ ವಂಶದ 25ನೇ ರಾಜನಾಗಿ ರಾಜ್ಯಭಾರ ಮಾಡಿ ಮತ್ತೆ ಭಾರತದೊಂದಿಗೆ ತನ್ನ ರಾಜ್ಯವನ್ನು ವಿಲೀನಗೊಳಿಸಿದರು. ಅನಂತರ ಭಾರತದ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ರಾಜಸ್ಥಾನಿ ಭಾಷೆಯ ಕುರಿತು ಬಹಳ ಹೋರಾಟ ಮಾಡಿದವರು ಹಾಗೂ ಆ ಭಾಷೆಯನ್ನು ಸಂವಿಧಾನದ ಅಡಿಯಲ್ಲಿ ಸೇರಿಸಬೇಕು ಎಂದು ದೊಡ್ಡ ಉದ್ದೇಶ ಇವರಿಗಿತ್ತು ಅದರಲ್ಲಿ ಯಶಸ್ವಿ ಕೂಡ ಆದರು. ಸ್ವತಂತ್ರ ಭಾರತದಲ್ಲಿ ಶೂಟಿಂಗ್ ಕ್ರೀಡೆಯಲ್ಲಿ ಅದಲ್ಲದೆ ಇನ್ನಿತರ ಕ್ರೀಡೆಗಳಲ್ಲಿ ಒಲಂಪಿಕ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಆಡುತ್ತಿದ್ದರು ಸುಮಾರು ಐದು ಬಾರಿ ಆಡಿ ಹಲವಾರು ಪದಕಗಳನ್ನು ಗೆದ್ದವರು. ಇವತ್ತಿಗೂ ಈ ನೆನಪಿನಲ್ಲಿ ದೆಹಲಿಯಲ್ಲಿ ಇವರ ಸ್ಮಾರಕ ಭವನವಿದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ