
ಕಾರ್ಮಿಕ ದಿನ
1886 ರಲ್ಲಿ ಯುನೈಟೆಡ್ ಸ್ಟೇಟ್ಸ್ ನ ಅತ್ಯಂತ ಕೆಲಸದ ಒತ್ತಡದ ನಿಮಿತ್ತ ಕಾರ್ಮಿಕರು ಪ್ರತಿಭಟನೆಯನ್ನು ಮಾಡಿದರು. ಸರ್ಕಾರದ ಹಾಗೂ ದೊಡ್ಡ ದೊಡ್ಡ ವೈವಾಟು ಉದ್ಯಮಗಳ ವಿರುದ್ಧವಾಗಿ ನಡೆದ ಪ್ರತಿಭಟನೆ ಕೊನೆಗೆ ಮೇ ಒಂದರಂದು ಹಿಂಸಾತ್ಮಕವಾದ ರೂಪವನ್ನು ಪಡೆದುಕೊಂಡು ಸಾವಿರಾರು ಕಾರ್ಮಿಕರು ಸಾವನ್ನಪ್ಪಿದರು. ಈ ದುಃಖದ ನೆನಪಿಗಾಗಿ ಹಾಗೂ ಕಾರ್ಮಿಕರಿಗೆ ನ್ಯಾಯವನ್ನು ಒದಗಿಸುವ ಸಲುವಾಗಿ ಅಂತರಾಷ್ಟ್ರೀಯ ಸಮಾಜವಾದಿ ಪಕ್ಷ ಪ್ರಪಂಚದಾದ್ಯಂತ ಈ ದಿವಸವನ್ನು ಕಾರ್ಮಿಕರ ದಿನ ಎನ್ನುವುದಾಗಿ ಘೋಷಿಸಿತು.

1923ರಿಂದ ಭಾರತದಲ್ಲೂ ಈ ದಿವಸವನ್ನು ಆಚರಿಸಲು ಪ್ರಾರಂಭವಾಯಿತು. ಕಾರ್ಮಿಕರಿಗೆ ನ್ಯಾಯವನ್ನು ಒದಗಿಸುವ ಸಲುವಾಗಿ ಹಾಗೂ ಕಾರ್ಮಿಕರ ಸೇವೆಯ ಶ್ರದ್ಧೆಯ ಪ್ರತೀಕವಾಗಿ ಈ ದಿವಸ ಅವರಿಗೆ ರಜೆ ಘೋಷಿಸಲಾಯಿತು. ಇವತ್ತು ಶಾಲೆಯಿಂದ ಹಿಡಿದು ಎಲ್ಲಾ ಕಡೆಯೂ ಮೇ ಒಂದು ರಜಾದಿನವಾಗಿ ಗುರುತಿಸಲ್ಪಟ್ಟಿದೆ. ನಮ್ಮ ಎಲ್ಲಾ ಉದ್ಯಮಗಳ ಯಶಸ್ಸಿಗೂ ಕಾರ್ಮಿಕರ ಶ್ರಮ ಹಾಗೂ ಶ್ರದ್ಧೆ ಅತ್ಯಂತ ಪ್ರಧಾನವಾದದ್ದು. ಆದ್ದರಿಂದ ಅವರಿಗೆ ಗೌರವ ಕೊಡಬೇಕಾದದ್ದು ಮಾನವೀಯತೆಯ ಪ್ರಥಮ ಹೆಜ್ಜೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ