
ಗುರುಪರಿವರ್ತನ
ಇವತ್ತು ಗುರು ಗ್ರಹ ವೃಷಭ ರಾಶಿಯಿಂದ ಮಿಥುನ ರಾಶಿಗೆ ತನ್ನ ಪಥವನ್ನು ಬದಲಿಸುತಿದ್ದಾನೆ. ಹೇಗೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ತನ್ನ ಮತವನ್ನು ಬದಲಿಸುವುದಕ್ಕೆ ತಿಂಗಳು ಹಾಗೂ ವರ್ಷಗಳು ಉರುಳುತ್ತದೆಯೋ ಅದೇ ರೀತಿ ಗುರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಗುರುವಿನ ಕಾಲಮಾನದ ಪ್ರಕಾರ ಒಂದು ವರ್ಷ ಕಳೆದಿರುತ್ತದೆ. ಹೇಗೆ ಸೂರ್ಯನ ಸಂಚಾರ ಕ್ರಮ ಅನುಸರಿಸಿ ಸಂವತ್ಸರವನ್ನು ತೀರ್ಮಾನಿಸುತ್ತೇವೆಯೋ, ಅದೇ ರೀತಿಯಲ್ಲಿ ಗುರುವಿನ ಸಂಚಾರ ಕ್ರಮವನ್ನು ಅನುಸರಿಸಿ ತೀರ್ಮಾನಿಸುವ ಕಾಲಮಾನಕ್ಕೆ ಪರಿವತ್ಸರ ಎಂದು ಹೆಸರು.

ಆ ರೀತಿಯಲ್ಲಿ ನಾವು ಕಂಡುಕೊಂಡರೆ ಇವತ್ತು ಪರಿವತ್ಸರದ ಯುಗಾದಿ ಎಂದು ತಿಳಿದುಕೊಳ್ಳಬೇಕು. ಮಿಥುನ ರಾಶಿಯ ಗುರು, ಬುಧನ ಕ್ಷೇತ್ರದಲ್ಲಿ ಇರುವುದರಿಂದ ಬೌದ್ಧಿಕವಾದ ವಿಚಾರದಲ್ಲಿ ಬಹಳ ಬದಲಾವಣೆಯನ್ನು ತರುತ್ತಾನೆ. ಇನ್ನು ಒಂದು ವರ್ಷಗಳಷ್ಟು ಕಾಲ ಇಲ್ಲಿರುವ ಗುರು ಅವರವರ ರಾಶಿಯ ಪ್ರಕಾರ ಅನುಕೂಲ ಪ್ರತಿಕೂಲತೆಯ ಮೂಲಕ ಲಾಭಾಲಾಭಗಳನ್ನು ಸುಖ ದುಃಖಗಳನ್ನು ಒದಗಿಸಿಕೊಡುತ್ತಾನೆ. ಗುರುವಿನ ಅನುಕೂಲಗಳು ಎಲ್ಲರಿಗೂ ದೊರಕಲಿ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ