ದಿನ ವಿಶೇಷ – ಗಂಗೋತ್ಪತ್ತಿ

Date:

spot_img

ಗಂಗೋತ್ಪತ್ತಿ

ಭಗೀರಥನ ಪ್ರಯತ್ನಕ್ಕೆ ಜೇಬಲೋಕದಿಂದ ಗಂಗಾ ಮಾತೆ ಧರೆಗೆಳಿದು ಬಂದ ದಿವಸ. ಭಾರತದ ಪವಿತ್ರ ನದಿಗಳಲ್ಲಿ ಮೊದಲನೆಯದಾಗಿ ಗುರುತಿಸಲ್ಪಡುವುದು ಗಂಗೆ. ಕಾರಣ ದೇವಲೋಕದ ಇತಿಹಾಸ ಹೊಂದಿದೆ ಎನ್ನುವುದಕ್ಕಾಗಿಯೂ ಹಾಗೂ ಭಾರತದ ಅತ್ಯಂತ ದೀರ್ಘವಾದ ದಾರಿಯನ್ನು ಕ್ರಮಿಸುವ ಮೂಲಕ ಹಲವು ರಾಜ್ಯದ ಜನತೆಗೆ ಜೀವನವಾಗಿದೆ ಎನ್ನುವುದಕ್ಕಾಗಿಯೂ. ಸಗರನ ಯಜ್ಞಾಶ್ವವನ್ನು ಇಂದ್ರ ಅಪಹರಿಸಿ ಪಾತಾಳದಲ್ಲಿ ತಪಸ್ಸು ಮಾಡುತ್ತಿದ್ದ ಕಪಿಲಮುನಿಯ ಹಿಂಬದಿಯಲ್ಲಿ ಇಟ್ಟ. ಸಗರನ ಆಜ್ಞೆಗೆ ಒಳಗಾದ ಮಕ್ಕಳು ಭೂಮಂಡಲವನ್ನು ಇಡೀ ಹುಡುಕಿದರೂ ಆ ಅಶ್ವವನ್ನು ಕಾಣದೆ, ನೆಲವನ್ನು ಬಗೆದು ಪಾತಾಳಕ್ಕೆ ಇಳಿದರು. ಅಲ್ಲಿ ಮುನಿಯ ಹಿಂಬದಿಯಲ್ಲಿರುವ ಕುದುರೆಯನ್ನು ಕಂಡಾಗ ಈ ಮುನಿಯ ಕದ್ದಿರಬೇಕು ಎಂದು ಹುಲಿಯನ್ನು ವಿಚಾರಿಸಹೋದರು. ಕ್ಷಣಮಾತ್ರದಲ್ಲಿ ಮುನಿಯ ಕೋಪದ ಕಣ್ಣಿಗೆ ತುತ್ತಾಗಿ ಭಸ್ಮವಾದರು.ಋಷಿ ಶಾಪದಿಂದ ಭಸ್ಮವಾದ್ದರಿಂದ ಅವರಿಗೆ ಮುಕ್ತಿ ಸಿಗಲಿಲ್ಲ.

ಅದಕ್ಕಾಗಿ ಪ್ರಯತ್ನಿಸಿದವ ಭಗೀರಥ. ತಪಸ್ಸಿನ ಮೂಲಕ ದೇವಗಂಗೆಯನ್ನು ತಂದು ಅವರಿಗೆ ಮುಕ್ತಿಯನ್ನು ಕೊಟ್ಟ. ಗಂಗೆ ಬರುವ ದಾರಿಯಲ್ಲಿ ಜುಹ್ನು ಎನ್ನುವ ಮಹರ್ಷಿಯ ಆಶ್ರಮಕ್ಕೆ ತಗುಲಿದ್ದರಿಂದ ಆತ ಸಿಟ್ಟಾಗಿ ಅವಳನ್ನು ತನ್ನೊಳಗೆ ಸೇರಿಸಿಕೊಂಡ. ನಂತರ ಭಗಿರಥನ ಪ್ರಾರ್ಥನೆಗೆ (ಕಿವಿಯಿಂದ) ಹೊರಗೆ ಬಿಟ್ಟ. ಅದಕ್ಕಾಗಿ ಗಂಗೆಗೆ ಜಾಹ್ನವಿ ಎಂದು ಹೆಸರು. ಜೀವನದಲ್ಲಿ ಇರಲಿ ಅಥವಾ ಜೀವ ಇಲ್ಲದಿರಲಿ ನಮ್ಮನ್ನು ಗಂಗೆ ಮಾತ್ರ ಪವಿತ್ರ ಮಾಡಬಲ್ಲಳು. ಅವಳು ನಮ್ಮನ್ನು ಪವಿತ್ರ ಗೊಳಿಸಲಿ ಎಂದು ಪ್ರಾರ್ಥಿಸೋಣ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.