
ಗಂಗೋತ್ಪತ್ತಿ
ಭಗೀರಥನ ಪ್ರಯತ್ನಕ್ಕೆ ಜೇಬಲೋಕದಿಂದ ಗಂಗಾ ಮಾತೆ ಧರೆಗೆಳಿದು ಬಂದ ದಿವಸ. ಭಾರತದ ಪವಿತ್ರ ನದಿಗಳಲ್ಲಿ ಮೊದಲನೆಯದಾಗಿ ಗುರುತಿಸಲ್ಪಡುವುದು ಗಂಗೆ. ಕಾರಣ ದೇವಲೋಕದ ಇತಿಹಾಸ ಹೊಂದಿದೆ ಎನ್ನುವುದಕ್ಕಾಗಿಯೂ ಹಾಗೂ ಭಾರತದ ಅತ್ಯಂತ ದೀರ್ಘವಾದ ದಾರಿಯನ್ನು ಕ್ರಮಿಸುವ ಮೂಲಕ ಹಲವು ರಾಜ್ಯದ ಜನತೆಗೆ ಜೀವನವಾಗಿದೆ ಎನ್ನುವುದಕ್ಕಾಗಿಯೂ. ಸಗರನ ಯಜ್ಞಾಶ್ವವನ್ನು ಇಂದ್ರ ಅಪಹರಿಸಿ ಪಾತಾಳದಲ್ಲಿ ತಪಸ್ಸು ಮಾಡುತ್ತಿದ್ದ ಕಪಿಲಮುನಿಯ ಹಿಂಬದಿಯಲ್ಲಿ ಇಟ್ಟ. ಸಗರನ ಆಜ್ಞೆಗೆ ಒಳಗಾದ ಮಕ್ಕಳು ಭೂಮಂಡಲವನ್ನು ಇಡೀ ಹುಡುಕಿದರೂ ಆ ಅಶ್ವವನ್ನು ಕಾಣದೆ, ನೆಲವನ್ನು ಬಗೆದು ಪಾತಾಳಕ್ಕೆ ಇಳಿದರು. ಅಲ್ಲಿ ಮುನಿಯ ಹಿಂಬದಿಯಲ್ಲಿರುವ ಕುದುರೆಯನ್ನು ಕಂಡಾಗ ಈ ಮುನಿಯ ಕದ್ದಿರಬೇಕು ಎಂದು ಹುಲಿಯನ್ನು ವಿಚಾರಿಸಹೋದರು. ಕ್ಷಣಮಾತ್ರದಲ್ಲಿ ಮುನಿಯ ಕೋಪದ ಕಣ್ಣಿಗೆ ತುತ್ತಾಗಿ ಭಸ್ಮವಾದರು.ಋಷಿ ಶಾಪದಿಂದ ಭಸ್ಮವಾದ್ದರಿಂದ ಅವರಿಗೆ ಮುಕ್ತಿ ಸಿಗಲಿಲ್ಲ.

ಅದಕ್ಕಾಗಿ ಪ್ರಯತ್ನಿಸಿದವ ಭಗೀರಥ. ತಪಸ್ಸಿನ ಮೂಲಕ ದೇವಗಂಗೆಯನ್ನು ತಂದು ಅವರಿಗೆ ಮುಕ್ತಿಯನ್ನು ಕೊಟ್ಟ. ಗಂಗೆ ಬರುವ ದಾರಿಯಲ್ಲಿ ಜುಹ್ನು ಎನ್ನುವ ಮಹರ್ಷಿಯ ಆಶ್ರಮಕ್ಕೆ ತಗುಲಿದ್ದರಿಂದ ಆತ ಸಿಟ್ಟಾಗಿ ಅವಳನ್ನು ತನ್ನೊಳಗೆ ಸೇರಿಸಿಕೊಂಡ. ನಂತರ ಭಗಿರಥನ ಪ್ರಾರ್ಥನೆಗೆ (ಕಿವಿಯಿಂದ) ಹೊರಗೆ ಬಿಟ್ಟ. ಅದಕ್ಕಾಗಿ ಗಂಗೆಗೆ ಜಾಹ್ನವಿ ಎಂದು ಹೆಸರು. ಜೀವನದಲ್ಲಿ ಇರಲಿ ಅಥವಾ ಜೀವ ಇಲ್ಲದಿರಲಿ ನಮ್ಮನ್ನು ಗಂಗೆ ಮಾತ್ರ ಪವಿತ್ರ ಮಾಡಬಲ್ಲಳು. ಅವಳು ನಮ್ಮನ್ನು ಪವಿತ್ರ ಗೊಳಿಸಲಿ ಎಂದು ಪ್ರಾರ್ಥಿಸೋಣ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ