
ಇಂಗ್ಲಿಷ್ ದಿನ
ಪ್ರಪಂಚದ ಬಹುತೇಕ ಭಾಗವನ್ನು ಈ ಭಾಷೆ ಬಸವಾಗಿಸಿಕೊಂಡಿದೆ. ಅಷ್ಟರಮಟ್ಟಿಗೆ ಪ್ರಸಿದ್ಧವಾಗಿದೆ ಹಾಗೂ ಸಂವಹನನಕ್ಕೆ ಮಾಧ್ಯಮವಾಗಿದೆ. ಯಾವ ಭಾಷೆ ಬಾರದಿದ್ದರೂ ಕೂಡ ಇಂಗ್ಲಿಷ್ ಒಂದು ಭಾಷೆ ಬಂದರೆ ಸಾಕು ಎನ್ನುವ ತರ ಮಟ್ಟಿಗೆ ವ್ಯಾಪಿಸಿಕೊಂಡಿದೆ. ಈ ಪ್ರಸಿದ್ಧಿಗೆ ಹಾಗೂ ಈ ವ್ಯಾಪ್ತಿಗೆ ಆ ಭಾಷೆಗೆ ತಲೆದೂಗಲೇಬೇಕು. ಆ ನಿಟ್ಟಿನಲ್ಲಿ ಆ ಭಾಷೆಯ ಪ್ರಸಿದ್ಧ ಕಾದಂಬರಿ ಕಾರ ಹಾಗೂ ನಾಟಕಕಾರನಾಗಿ ಕರೆಯಿಸಿಕೊಂಡ ವಿಲಿಯಂ ಶೇಕ್ಸ್ಪಿಯರ್ ಹುಟ್ಟಿದ ದಿನ ಎನ್ನುವ ನಂಬಿಕೆಯಿಂದ ಈ ದಿನವನ್ನು ಇಂಗ್ಲಿಷ್ ದಿನವನ್ನಾಗಿ ಆಚರಿಸಬೇಕು ಎನ್ನುವ ಉದ್ದೇಶದಿಂದ ಮೀಸಲಾಗಿರಿಸಿದೆ.

ಇಂಗ್ಲಿಷ್ ಭಾಷೆಯನ್ನು ಸಾಹಿತ್ಯದ ಮೂಲಕ ಮೊಟ್ಟಮೊದಲ ಶ್ರೀಮಂತವನ್ನಾಗಿಸಿದ್ದು ವಿಲಿಯಂ ಶೇಕ್ಸ್ಪಿಯರ್. ಈತನ ಹುಟ್ಟಿನ ಬಗ್ಗೆ ಅಲ್ಲದೆ ಎಲ್ಲಾ ವಿಚಾರಗಳನ್ನು ಕೂಡ ನಿಖರವಾದ ಯಾವುದೇ ದಾಖಲೆಗಳಿಲ್ಲ. ಆದರೂ ಕೂಡ ಅನುಮಾನದ ಆಧಾರದಲ್ಲಿ ಈತನ ಜನ್ಮದಿನವನ್ನು ಇಂಗ್ಲಿಷ್ ದಿನದ ಮೂಲಕ ಆಚರಿಸುವುದಾಗಿ ವಿಶ್ವಸಂಸ್ಥೆ ತೀರ್ಮಾನಿಸಿದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ