
ದಮನಕ ಚತುರ್ದಶಿ
ಚೈತ್ರ ಮಾಸದ 14ನೆಯ ದಿವಸವನ್ನು ದಮನಕ ಚತುರ್ದಶಿ ಎಂದು ಆಚರಿಸುತ್ತಾರೆ. ದಮನಕ ಎಂದರೆ ವಿಷ್ಣುವಿನ ಹೆಸರು. ನಮ್ಮೊಳಗಿನ ಎಲ್ಲಾ ದೋಷವನ್ನು ನಾಶ ಮಾಡುವವ ಎನ್ನುವ ಅನುಸಂಧಾನದಲ್ಲಿ ಈ ಹೆಸರಿನಿಂದ ಭಗವಾನ್ ಮಹಾವಿಷ್ಣುವನ್ನು ಮಹಾರಾಷ್ಟ್ರ ಒರಿಸ್ಸಾ ಗುಜರಾತ್ ಇತ್ಯಾದಿ ರಾಜ್ಯಗಳಲ್ಲಿ ಈ ದಿವಸದ ಸಂಶಯಕಾಲದಲ್ಲಿ ವಿಶೇಷವಾಗಿ ಆರಾಧಿಸುತ್ತಾರೆ.

ಇನ್ನು ಕೆಲವು ಕಡೆ ಜಗನ್ಮಾತೆ ಹಿಂಗುಲಾಂಬಿಕೆಯನ್ನು ಕೂಡ ಈ ದಿವಸ ಅಗ್ನಿಯ ಮೂಲಕವಾಗಿ ಆರಾಧಿಸುವ ಪದ್ಧತಿ ಇದೆ. ಅಗ್ನಿ ವಸ್ತುಗಳನ್ನು ಸುಡುವಂತೆ, ನಮ್ಮೊಳಗಿನ ಬೇಡದ ವಿಚಾರಗಳನ್ನೆಲ್ಲ ಅಗ್ನಿ ಸುಟ್ಟು ಹಾಕಲಿ ಎನ್ನುವ ಉದ್ದೇಶವಷ್ಟೇ. ಅದೇನೇ ಇರಲಿ ಆರಾಧನೆ ಅಲ್ಲದೆ ಕೇವಲ ವಿಚಾರಧಾರೆಯಿಂದಲೂ ಭಗವಂತ ನಮ್ಮನ್ನು ಅನುಗ್ರಹಿಸುತ್ತಾನೆ ಆದ್ದರಿಂದ ನಮ್ಮಲ್ಲಿ ಅಷ್ಟಾಗಿ ಆಚರಣೆಯಲ್ಲಿಲ್ಲದ ಈ ವಿಚಾರವನ್ನು ತಿಳಿದುಕೊಂಡಾದರೂ ಭಗವಂತನ ಅನುಗ್ರಹದಿಂದ ನಾವು ಪಾಪ ವಿಮುಕ್ತರಾಗೋಣ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ