
ಮೂರ್ಖರ ದಿನ
ಮಕ್ಕಳಿಗೆ ಇದು ಪ್ರಸಿದ್ಧವಾಗಿ ಗೊತ್ತಿರುವ ದಿನವಾಗಿದೆ. ಆ ದಿವಸ ಮಕ್ಕಳಂತೂ ಪರಸ್ಪರ ಏಪ್ರಿಲ್ ಫೂಲ್ ಎಂದು ಹೇಳಿಕೊಂಡು ಆಡಿಕೊಳ್ಳುತ್ತವೆ. ಈ ದಿನವನ್ನು ಈ ಹೆಸರಿನ ಮೂಲಕ ಆಚರಿಸುವುದಕ್ಕೆ ನಮಗೆ ಬಹಳಷ್ಟು ಪ್ರಬಲವಾದ ಯಾವುದೇ ಕಾರಣಗಳು ಸಿಗುವುದಿಲ್ಲ. ನನಗೆ ಕಾಣುವುದು ಹಿಂದುಗಳು ಏಪ್ರಿಲ್ ಅನ್ನು ಹೊಸ ತಿಂಗಳು ಎಂದು ಕಂಡುಕೊಳ್ಳುತ್ತಾರೆ ಅದನ್ನು ವಿರೋಧಿಸುವ ಸಲುವಾಗಿ ಅಥವಾ ತಮಾಷೆ ಮಾಡುವ ಉದ್ದೇಶದಿಂದ ಏಪ್ರಿಲ್ ಒಂದನ್ನು ಮೂರ್ಖರ ದಿವಸ ಎಂದು ಪಾಶ್ಚಾತ್ಯರು ತೀರ್ಮಾನಿಸಿರಬಹುದು.

ಇದಕ್ಕೆ ಒಂದು ಪುಷ್ಟಿ ಕೂಡ ಇದೆ. 1582ರಲ್ಲಿ ಚಾರ್ಲ್ಸ್ ಎನ್ನುವ ಫ್ರಾನ್ಸ್ ರಾಜ ಜನವರಿ ಒಂದನ್ನು ಹೊಸ ವರ್ಷದ ಮೊದಲ ದಿವಸ ಎಂದು ತೀರ್ಮಾನಿಸಿದ ಅಲ್ಲಿಂದ ಏಪ್ರಿಲ್ ಒಂದು ಮೂರ್ಖರ ದಿನವಾಗಿ ಕಾಣಿಸಿಕೊಂಡಿದೆ ಎನ್ನುವ ವಾದವಿದೆ. ಅದೇನೆ ಇರಲಿ ನಮಗಂತೂ ಏಪ್ರಿಲ್ ಹೊಸ ವರ್ಷದ ದಿವಸ. ಆದ್ದರಿಂದ ಏಪ್ರಿಲ್ ನಮಗೆ ವಿಶೇಷವೇ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ