
ಅಡಾಲ್ಫ್ ಹಿಟ್ಲರ್
ಇತಿಹಾಸದಲ್ಲಿ ಗುರುತಿಸಲ್ಪಟ್ಟ ದುರಂತ ಖಳನಾಯಕರಲ್ಲಿ ಹಿಟ್ಲರ್ ಕೂಡ ಒಬ್ಬ. ಯಾವ ಕಾಲಕ್ಕೂ ಇಂತಹ ಮಗ ಹುಟ್ಟಬಾರದು ಎನ್ನುವಷ್ಟರ ಮಟ್ಟಿಗೆ ತನ್ನನ್ನು ಗುರುತಿಸಿಕೊಂಡವ. ಈತ 1889ರ ಏಪ್ರಿಲ್ 20 ರಂದು ಈಗಿನ ಆಸ್ಟ್ರಿಯಾದಲ್ಲಿ ಹುಟ್ಟಿದ. ಗುಡಿಸಲು ಎನ್ನುವ ಅರ್ಥದಲ್ಲಿ ಜರ್ಮನ್ ಭಾಷೆಯಲ್ಲಿ ಹಟ್ಲರ್ ಎನ್ನುವ ಶಬ್ದವಿದೆ. ಆ ಮೂಲಕ ಅಲ್ಲಿರುವ ಎನ್ನುವ ಅರ್ಥದಲ್ಲಿ ಹಿಟ್ಲರ್ ಎನ್ನುವ ಹೆಸರು. ತನ್ನ ಮತಾಂಧತೆಯ ಪ್ರತೀಕವಾಗಿ ಯಹೂದಿಗಳನ್ನು ಸಾರ್ವತ್ರಿಕವಾಗಿ ಕೊಲ್ಲುಸುತ್ತಿದ್ದವ. ಸುಮಾರು ಐದಾರು ಯುದ್ಧಗಳನ್ನು ಮಾಡಿದ್ದಲ್ಲದೆ 11 ಮಿಲಿಯನ್ ಅಷ್ಟು ಜನರನ್ನು ಯುದ್ಧವಿಲ್ಲದೆ ಉಪವಾಸ ಹಾಕಿ ಕೊಂದಿದ್ದಾನೆ. ಇಂತಹ ಪರಮ ಪಾತಕಿ ಕೂಡ ತನ್ನ ಕೊನೆಯ ಕಾಲದಲ್ಲಿ ಸಸ್ಯಹಾರವನ್ನು ತಿನ್ನುತ್ತಿದ್ದನು.

1949 ಏಪ್ರಿಲ್ 29ರಂದು ಮುಂಚಿನ ದಿವಸ ಮದುವೆಯಾದ ಸಂಗಾತಿಯೊಂದಿಗೆ ಪಾಪಕ್ಕೆ ಪ್ರಾಯಶ್ಚಿತ್ತ ರೂಪದಲ್ಲಿ ಕೊನೆಗೆ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆದರೆ ತನ್ನ ಕೊನೆಯ ಕಾಲದಲ್ಲಿ ಬ್ರಿಟಿಷರಿಂದ ಭಾರತದ ವಿಮೋಚನೆಗಾಗಿ ಸುಭಾಷ್ ಚಂದ್ರ ಬೋಸರೊಂದಿಗೆ ಕೈಗೂಡಿಸಿದ್ದನ್ನು ಇತಿಹಾಸ ದಾಖಲಿಸಿದೆ. ಆದರೆ ಎರಡನೇ ಮಹಾಯುದ್ಧ ಏರ್ಪಟ್ಟ ಕಾರಣ ಅದು ಕೈಗೂಡಲಿಲ್ಲ. ಹೊಟ್ಟೆಯಲ್ಲಿ ಆ ಯುದ್ಧದ ಕೊನೆಯ ಭಾಗದಲ್ಲಿ ತಾನೇ ತನ್ನನ್ನು ಕೊಂದುಕೊಂಡ. ಆದ್ದರಿಂದ ಬೋಸರ ಯೋಚನೆ ವಿಫಲವಾಯಿತು. ಬ್ರಿಟಿಷರ ದ್ವೇಷಿಯಾದ ಈತ ಬದುಕಿದ್ದಿದ್ದರೆ ಭಾರತದ ಪಾಲಿಗೆ ಲಾಭವಾಗುತ್ತಿತ್ತೋ ಏನೋ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ