
ಬೇಸಿಗೆಯಲ್ಲಿ ದೇಹದ ಉಷ್ಣತೆ ಹತೋಟಿಯಲ್ಲಿಡಲು ಅಡುಗೆ ಮನೆಯಲ್ಲಿರುವ ಒಂದು ಸಾಮಾನ್ಯ ಮಸಾಲೆ ಪದಾರ್ಥವಾದ ಮೆಂತ್ಯೆ ಕಾಳು ಬಹುಪಯೋಗಿಯಾಗಿ ಬಳಕೆಯಾಗುತ್ತದೆ. ಈ ಮೆಂತ್ಯೆ ಕಾಳು ಆರೋಗ್ಯದ ಹಲವಾರು ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಒದಗಿಸುತ್ತದೆ.
ಚರ್ಮದ ಆರೋಗ್ಯದಿಂದ ಹಿಡಿದು, ತೂಕ ಇಳಿಕೆ, ಸಕ್ಕರೆ ಕಾಯಿಲೆ ನಿಯಂತ್ರಣ, ತಲೆಹೊಟ್ಟು ನಿವಾರಣೆ, ಅಜೀರ್ಣ ಶಮನ, ಋತುಚಕ್ರದ ಹೊಟ್ಟೆನೋವು, ಬೆನ್ನುನೋವು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಇದು ಫಲಕಾರಿಯಾಗುತ್ತದೆ.
- ಅಜೀರ್ಣ ಸಮಸ್ಯೆ ಇದ್ದರೆ, ಒಂದು ಚಮಚ ಮೆಂತ್ಯೆ ಕಾಳನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದು ಶಮನಕಾರಿಯಾಗಿ ಕೆಲಸ ಮಾಡುತ್ತದೆ.
- ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ, ಒಂದು ಚಮಚ ಮೆಂತ್ಯೆ ಕಾಳನ್ನು ರಾತ್ರಿ ನೆನೆಸಿ, ಬೆಳಿಗ್ಗೆ ಅದರ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಪರಿಣಾಮಕಾರಿಯಾಗಿದೆ.
- ಗ್ಯಾಸ್ಟ್ರಿಕ್ ಸಮಸ್ಯೆಗೂ ಇದು ಉತ್ತಮ ಪರಿಹಾರ.
- ನೆನೆಸಿದ ಮೆಂತ್ಯೆ ಕಾಳುಗಳನ್ನು ನೇರವಾಗಿ ತಿಂದರೂ ಸಹ ಆರೋಗ್ಯ ಲಾಭ ಸಿಗುತ್ತದೆ.
- ಮೆಂತ್ಯೆ ಕಾಳುಗಳನ್ನು ನುಣ್ಣಗೆ ರುಬ್ಬಿ ತಲೆಗೆ ಹಚ್ಚಿದರೆ ತಲೆಹೊಟ್ಟು ನಿವಾರಣೆಯಾಗುವುದರ ಜೊತೆಗೆ ದೇಹಕ್ಕೆ ತಂಪು ನೀಡುತ್ತದೆ.
ಈ ಬೇಸಿಗೆಯಲ್ಲಿ ಔಷಧೀಯ ಗುಣವಿರುವ ಮೆಂತ್ಯೆ ಕಾಳುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಆರೋಗ್ಯಕರ ಜೀವನಶೈಲಿಯನ್ನು ನಿಮ್ಮದಾಗಿಸಿಕೊಳ್ಳಿ.