
ತೂಕ ಇಳಿಸಲು ಶ್ರಮಿಸುವವರು ಈಗ ಅಡುಗೆ ಮನೆಯಲ್ಲೇ ಇರುವ ಲವಂಗವನ್ನು ನೈಸರ್ಗಿಕ ಪರಿಹಾರವಾಗಿ ಬಳಸಬಹುದು ಎಂಬ ವಿಷಯ ಅಧ್ಯಯನಗಳಿಂದ ದೃಢವಾಗಿದೆ. ಲವಂಗವು ದೇಹದ ಮೆಟಬಾಲಿಸಂ (ಚಯಾಪಚಯ ಕ್ರಿಯೆ) ಅನ್ನು ಉತ್ತೇಜಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತದ ಸಕ್ಕರೆ ಮಟ್ಟವನ್ನು ಸಮತೋಲದಲ್ಲಿ ಇಡಲು ಸಹಕಾರಿಯಾಗಿದೆ.

ಲವಂಗದಲ್ಲಿ ಯುಜೆನೋಲ್ ಎನ್ನುವ ಶಕ್ತಿಶಾಲಿ ಅಂಶವಿದ್ದು, ಅದು ದೇಹದ ಕೊಬ್ಬು ಕರಗಿಸುವ ಕ್ರಿಯೆಗೆ ಸಹಾಯಕವಾಗುತ್ತದೆ. ಇದಲ್ಲದೆ, ಲವಂಗವು ವಿಟಮಿನ್ ಸಿ, ವಿಟಮಿನ್ ಇ, ಬಿ, ಕೆ ಮುಂತಾದ ಪೋಷಕಾಂಶಗಳನ್ನು ಹೊಂದಿದ್ದು, ಒಟ್ಟಾರೆ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಿದೆ.
ಲವಂಗ ಬಳಸುವ ಕೆಲ ಪರಿಣಾಮಕಾರಿ ವಿಧಾನಗಳು:
ಬೆಳಿಗ್ಗೆ ಖಾಲಿ ಹೊಟ್ಟೆಗೆ ಲವಂಗ ಹಾಕಿದ ಬಿಸಿ ನೀರು ಕುಡಿಯುವುದು
ಲವಂಗ, ಜೇನು ಮತ್ತು ನಿಂಬೆ ಸೇರಿಸಿದ ಚಹಾ ಸೇವನೆ
ಸ್ಮೂದಿಗಳಲ್ಲಿ ಲವಂಗ ಸೇರಿಸಿ ಪಾನೀಯ ತಯಾರಿಸುವುದು
ಆಹಾರದಲ್ಲಿ ದಾಲ್ಚಿನ್ನಿ, ಜೀರಿಗೆ, ಅಜ್ವೈನ್ ಜೊತೆಗೆ ಲವಂಗ ಬಳಕೆ
ಊಟದ ನಂತರ ಬಾಯಿಗೆ ಲವಂಗ ಹಾಕಿ ಚೀಪುವುದು

ಲವಂಗದ ತೀವ್ರ ಪರಿಮಳ ಹಾಗೂ ಅದರಲ್ಲಿರುವ ಕೆಮಿಕಲ್‌ಗಳು ಹಸಿವನ್ನು ನಿಯಂತ್ರಿಸುತ್ತವೆ ಮತ್ತು ಬೇಡವಾದ ಆಹಾರ ಸೇವನೆಯ ಇಚ್ಛೆಯನ್ನು ಕಡಿಮೆ ಮಾಡುತ್ತವೆ. ದಿನನಿತ್ಯದ ಆಹಾರದಲ್ಲಿ ಲವಂಗವನ್ನು ಸರಿಯಾಗಿ ಬಳಸಿದರೆ ಅದು ತೂಕ ಇಳಿಕೆಯ ನೈಸರ್ಗಿಕ ಮಾರ್ಗವಾಗಿ ಉಪಯೋಗವಾಗಿತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.