
ಚಿತ್ರರಥ ಎನ್ನುವ ರಾಜ ಏಕಾದಶಿಯ ದಿವಸ ನದಿಯ ದಂಡೆಯಲ್ಲಿರುವ ನೆಲ್ಲಿಕಾಯಿಯ ಮರದ ಕೆಳಗೆ ತನ್ನವರನ್ನು ಹಾಗೆಯೇ ಬೇಟೆಗಾರರನ್ನು ಕೂಡ ಕೂಡಿಕೊಂಡು ಏಕಾದಶಿ ವ್ರತದ ಆಚರಣೆಯನ್ನು ಧ್ಯಾನ ಪ್ರವಚನಗಳ ಮೂಲಕ ನಡೆಸಿದನು. ಈ ಪುಣ್ಯದ ಕಾರಣದಿಂದ ಆತ ವಸುರಥ ಎನ್ನುವ ಅಭಿಧಾನದಿಂದ ಪುನರ್ಜನ್ಮವನ್ನು ಪಡೆದು ಕೀರ್ತಿವಂತನಾಗುತ್ತಾನೆ. ಆದ್ದರಿಂದ ಈ ಏಕಾದಶಿಗೆ ಆಮಲಕಿ ಏಕಾದಶಿ ಎಂದು ಕರೆಯುವುದು.
ನೆಲ್ಲಿಕಾಯಿ ತಿನ್ನುವಾಗ ಹುಳಿಯಾಗಿದ್ದರೂ ಕೂಡ ಆಮೇಲೆ ಕುಡಿದ ನೀರು ಸಿಹಿಯಾಗಿರುವುದನ್ನು ನಾವು ಅನುಭವಿಸಿದ್ದೇವೆಯಲ್ಲವೇ. ನೀರಿಗೆ ಜೀವನ ಎಂದು ಹೆಸರು ಯಾಕೆಂದರೆ ಅದು ನಮಗೆ ಜೀವನವನ್ನು ಕೊಡುತ್ತದೆ. ಹಾಗೆಯೇ ಕರ್ಮ ಕಹಿಯಾಗಿದ್ದರು ಆ ಮೇಲಿನ ಜೀವನ ಸಿಹಿಯಾಗಿರುತ್ತದೆ ಎನ್ನುವ ಸಂದೇಶ ಈ ಏಕಾದಶಿಯ ಮೂಲಕ ಕಾಣುತ್ತೇವೆ. ಉಪವಾಸ ನಮ್ಮೆಲ್ಲಾ ದೋಷಗಳನ್ನು ದೂರವಾಗಿಸುತ್ತದೆ. ಈ ದಿನದ ಗೋವಿಂದರೂಪಿ ಭಗವಂತನನ್ನು ನಮಗೆ ಹತ್ತಿರವಾಗಿಸುತ್ತದೆ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ