ಮೊಬೈಲ್ ನುಂಗಿ ಮಹಿಳೆ ಸಾವು

Date:

spot_img

ಆಂಧ್ರಪ್ರದೇಶದ ಕಾಕಿನಾಡದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 35 ವರ್ಷದ ರಮ್ಯ ಸ್ಮೃತಿ ಎಂಬ ಮಹಿಳೆಯೊಬ್ಬರು ಮೊಬೈಲ್‌ ಫೋನ್‌ ನುಂಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕುಟುಂಬದವರು ತಿಳಿಸಿದಂತೆ, ರಮ್ಯ ಕಳೆದ 15 ವರ್ಷಗಳಿಂದ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದರೆ, ಇತ್ತೀಚೆಗೆ ಅವರು ಮೊಬೈಲ್‌ ಫೋನನ್ನು ನುಂಗಿದ್ದು, ಮನೆಯವರು ಅದಕ್ಕಾಗಿ ಹುಡುಕಾಟ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಮನೆಮಂದಿ ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮೊಬೈಲ್‌ ನುಂಗಿದ ಪರಿಣಾಮ ಆಕೆಯ ಅನ್ನನಾಳಕ್ಕೆ ಪೆಟ್ಟು ಬಿದ್ದಿದೆ ಎಂದು ತಿಳಿಸಿದ್ದಾರೆ. ನಂತರ, ಆಕೆಯನ್ನು ಜ. 25 ರಂದು ಕಾಕಿನಾಡದ ಜಿಜಿಎಚ್‌ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಆಕೆ ಚಿಕಿತ್ಸೆಗಾಗಿ ಸ್ಪಂದಿಸದೆ ಮೃತರಾಗಿದ್ದಾರೆ.
ಮೃತಳ ತಂದೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಗಳ ಸಾವಾಗಿರುವುದಾಗಿ ಆರೋಪಿಸಿದ್ದಾರೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕರ್ನಾಟಕ ಮಳೆ ಮುನ್ಸೂಚನೆ: 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 7 ದಿನ ಭಾರಿ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕವಿವಿ ಪ್ರಾಧ್ಯಾಪಕ ವಿರುದ್ಧ ಗಂಭೀರ ಆರೋಪ; ತನಿಖೆಗೆ ಒತ್ತಾಯ

ಕವಿವಿ ಪ್ರಾಧ್ಯಾಪಕರ ವಿರುದ್ಧ ವಿದ್ಯಾರ್ಥಿನಿ ಸಂಬಂಧ ಹಾಗೂ ಕಿರುಕುಳ ಆರೋಪ ಕೇಳಿಬಂದಿದ್ದು, ತನಿಖೆಗೆ ಒತ್ತಾಯ ಹೆಚ್ಚಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ: ವಾಟ್ಸಾಪ್ RTO PDF ಮೂಲಕ 5.6 ಲಕ್ಷ ಸೈಬರ್ ವಂಚನೆ

ಕಾರ್ಕಳದಲ್ಲಿ ವಾಟ್ಸಾಪ್ ಆರ್‌ಟಿಒ ಪಿಡಿಎಫ್ ಫೈಲ್ ತೆರೆದು 5.63 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ. ಸೈಬರ್ ವಂಚನೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜೈಪುರದಲ್ಲಿ ಲಿಫ್ಟ್ ಕಳ್ಳಿ ರೆಡ್‌ಹ್ಯಾಂಡ್ ಅರೆಸ್ಟ್

ಜೈಪುರದಲ್ಲಿ ಲಿಫ್ಟ್ ಕೇಳುವ ನೆಪದಲ್ಲಿ ಬೈಕ್ ಸವಾರನ ಮೊಬೈಲ್ ಕದಿಯಲು ಯತ್ನಿಸಿದ ಯುವತಿಯ ಕಳ್ಳತನದ ವಿಡಿಯೋ ವೈರಲ್ ಆಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.