

ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕದ ಪ್ರಾಥಮಿಕ ವಿಭಾಗದ ಶಾಲಾ ವಾರ್ಷಿಕೋತ್ಸವವು ದಿನಾಂಕ 03-01-2025 ರಂದು ಶ್ರೀ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬಿ. ಎಲ್. ವಿಶ್ವಾಸ್ ಭಟ್ ಇವರು ವಹಿಸಿದ್ದರು, ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಂತಿ ಶೆಟ್ಟಿ ಬೊಮ್ಮರ ಬೆಟ್ಟು, ಚೇರ್ ಮೆನ್ & ಮ್ಯಾನೇಜಿಂಗ್ ಡೈರೆಕ್ಟರ್ ಎನ್ ಪಿ ಗ್ರೂಪ್ಸ್ ನ ಮಾಲಕರಾದ ಶ್ರೀ ವಾಸುದೇವ್ ಭಟ್ ನೆಕ್ಕರಪಲ್ಕೆ , ಶ್ರೀಮತಿ ಜಯಶೀಲ ರೋಟೆ ಬಿ ಆರ್ ಪಿ ಉಡುಪಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ರಾವ್ ಇವರೆಲ್ಲರೂ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಾಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ದಿನಾಂಕ 31-12-2024 ರಂದು ನಿವೃತ್ತರಾದ ಶ್ರೀಮತಿ ಜಯಂತಿ ಎಸ್ ರಾವ್ ಅವರನ್ನು ಸನ್ಮಾನಿಸಲಾಯಿತು.
ಶ್ರೀಕೃಷ್ಣ ಎ ಹಿರಿಯ ಮುಖ್ಯೋಪಾಧ್ಯಾಯರು ಶಾಲಾ ವರದಿ ಮಂಡಿಸಿದರು.
ಶ್ರೀಮತಿ ರೇವತಿ ಯವರು ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.
ಸಹಶಿಕ್ಷಕಿ ಶ್ರೀಮತಿ ಪುಷ್ಪ ಇವರು ವಂದನಾರ್ಪಣೆಗೈದರು.