
ಮಣಿಪಾಲದ ಪರ್ಕಳ ಅಚ್ಚುತ ನಗರದಲ್ಲಿ ವಿಷಾದಕಾರಿ ಘಟನೆ ನಡೆದಿದೆ.
ವಿಪರೀತ ಮದ್ಯಪಾನದ ಚಟ ಹೊಂದಿದ್ದ 43 ವರ್ಷದ ಟೂರಿಸ್ಟ್ ವಾಹನ ಚಾಲಕ ಸಂತೋಷ ಆರ್.ಕೆ. ಅವರು, ವೈಯಕ್ತಿಕ ಕಾರಣಗಳಿಂದ ಮನನೊಂದು ಜನವರಿ 10ರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಂತೋಷ್ ರವರು ಟೂರಿಸ್ಟ್ ವಾಹನಗಳನ್ನು ಇಡಲು ಬಳಸುತ್ತಿದ್ದ ಶೆಡ್ಡಿನಲ್ಲಿ, ಕಬ್ಬಿಣದ ರಾಡಿಗೆ ನೇಣು ಬಿಗಿದು ಜೀವನವನ್ನು ಕೊನೆಗೊಳಿಸಿರುವುದು ಬೆಳಕಿಗೆ ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.