
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ತಂತ್ರಿ ಹಾಗೂ ಅರ್ಚಕ ಮಂಜುನಾಥ ಅಡಿಗ (66) ಹೃದಯಾಘಾತದಿಂದ ಜ.1ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ದೇವಸ್ಥಾನದ ಪೂಜಾ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿದ್ದರು. ಮೃತರು ಪತ್ನಿ, ಪುತ್ರ ನಿತ್ಯಾನಂದ ಅಡಿಗ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಕೊಲ್ಲೂರಿನ ತಂತ್ರಿ ಗೆಸ್ಟ್ ಹೌಸ್ ಮಾಲಕ ಮಂಜುನಾಥ್ ಅಡಿಗ ಅವರು ಎಲ್ಲಾ ವರ್ಗದ ಭಕ್ತರಿಗೆ ಧಾರ್ಮಿಕ ಕಾರ್ಯಗಳಲ್ಲಿ ಮಾರ್ಗದರ್ಶನ ನೀಡಿ ತಮ್ಮ ಅನುಭವಗಳೊಂದಿಗೆ ಸಮರ್ಪಣಾ ಸೇವೆಯನ್ನು ಸಲ್ಲಿಸಿದರು. ದಶಕಗಳ ಕಾಲ ಮುಖ್ಯ ತಂತ್ರಿಯಾಗಿ ಸೇವೆ ಸಲ್ಲಿಸಿದ ಅವರು ಅನಾರೋಗ್ಯದ ಕಾರಣ ತಮ್ಮ ಪುತ್ರ ನಿತ್ಯಾನಂದ ಅಡಿಗ ಅವರಿಗೆ ಪೂಜಾ ಕಾರ್ಯಗಳನ್ನು ಹಸ್ತಾಂತರಿಸಿದರು.
ಮಂಜುನಾಥ್ ಅಡಿಗರ ಸರಳತೆ, ಸೌಜನ್ಯ, ಭಕ್ತರೊಂದಿಗಿನ ಆತ್ಮೀಯ ಸಂಬಂಧ ಕೊಲ್ಲೂರು ಭಾಗದಲ್ಲಿ ಅವಿನಾಭಾವ ಸಂಬಂಧವನ್ನು ಮೂಡಿಸಿತು. ಅವರ ಧಾರ್ಮಿಕ ಸೇವೆ ಮತ್ತು ಜೀವನಶೈಲಿ ಭಕ್ತರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ.