
ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಕರ್ನಾಟಕ ಇದರ 82ನೇ ಸೇವಾ ಯೋಜನೆ ಒಂದಿಷ್ಟು ಸಮಾಜಕ್ಕಾಗಿ.
ಶ್ರೀ ಜನಾರ್ಧನ ಎಜುಕೇಶನ್ ಟ್ರಸ್ಟ್ ರಿಜಿಸ್ಟರ್ ಎಳ್ಳಾರೆ ಯಿಂದ ಶಾಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಲ್ಲಿ ಮಕ್ಕಳಿಗಾಗಿ ಫ್ಯಾನಿನ ವ್ಯವಸ್ಥೆಯನ್ನು ನಮ್ಮ ಸಂಸ್ಥೆಯಿಂದ ನೀಡಲು ಬೇಡಿಕೆ ನೀಡಿದ್ದು, ಈ ಮನವಿಗೆ ಸ್ಪಂದಿಸಿ
ನಮ್ಮ ಸಂಸ್ಥೆಯ ವತಿಯಿಂದ ಸೇವಾ ಯೋಜನೆಯಾಗಿ ₹10,000/ ಸಾವಿರ ಮೊತ್ತದ 6 ಪ್ಯಾನ್ ನ್ನು ಶಾಲೆಗೆ ನೀಡಲಾಯಿತು. ಈ ಸೇವಾ ಯೋಜನೆಯನ್ನು ಕರಕರ ಫ್ರೆಂಡ್ಸ್ ಸೇವಾ ಬಳಗದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಪೂಜಾರಿಯವರು ಶಾಲಾ ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಶಿಕ್ಷಕರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕರಕರಿ ಫ್ರೆಂಡ್ಸ್ ಸೇವಾ ಬಳಗದ ಪದಾಧಿಕಾರಿಗಳು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು ಶಿಕ್ಷಕ ವೃಂದದವರು ಹಾಜರಿದ್ದರು.