
ಕಾರ್ಕಳ: ಉದ್ಯೋಗ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮುಲ್ಲಡ್ಕ ಗ್ರಾಮದ ಸುಚಿತ್ (29) ಎಂಬಾತ ಅವಿನಾಶ್ ಎಂಬಾತನ ಮೂಲಕ ಕೆಲಸ ಅರಸಿ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಮಂಗಳೂರಿನ ಕದ್ರಿಯಲ್ಲಿರುವ ಸನ್ನಿಧಿ ಇಂಟೀರಿಯರ್ ಡಿಸೈನ್ ನಲ್ಲಿ ಕೆಲಸ ಮಾಡುತ್ತಿರುವ ಸುಚಿತ್ ಗೆಳತಿಯ ಪರಿಚಯದ ಮೂಲಕ ಅವಿನಾಶ್ ತನ್ನನ್ನು ತಾನು ಜಾಬ್ ಬ್ರೋಕರ್ ಎಂದು ಪರಿಚಯಿಸಿಕೊಂಡಿದ್ದಾನೆ.
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ಅವಿನಾಶ್ ಅವರು 1,05,600 ರೂ. ಹಣ ಪಡೆದಿದ್ದಾರೆ ಎಂದು ಸುಚಿತ್ ತಿಳಿಸಿದರು.
ಸುಚಿತ್ ನವೆಂಬರ್ 18ರಿಂದ ಡಿಸೆಂಬರ್ 26ರವರೆಗೆ ಆನ್ ಲೈನ್ ಮೂಲಕ 20 ಸಾವಿರ ಪಾವತಿಸಿದ್ದು, ಉಳಿದ ಹಣವನ್ನು ನಗದು ಮೂಲಕ ನೀಡಿರುತ್ತಾರೆ.ಡಿಸೆಂಬರ್ 13ರಂದು ಕೆಲಸಕ್ಕೆ ಸೇರಿಸುವುದಾಗಿ ಅವಿನಾಶ್ ಭರವಸೆ ನೀಡಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.