
ಟೆಹ್ರಾನ್/ಟೆಲ್ ಅವೀವ್: ಪಶ್ಚಿಮ ಏಷ್ಯಾದ ಪ್ರಾದೇಶಿಕ ಸಂಘರ್ಷ ಈಗ ಗಂಭೀರ ಹಂತ ತಲುಪಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧೋನ್ಮಾದ ಹೆಚ್ಚಾಗಿದ್ದು, ಎರಡೂ ದೇಶಗಳು ಪರಸ್ಪರ ದಾಳಿ ನಡೆಸಿವೆ.
ಇಸ್ರೇಲ್ ತನ್ನ “ಆಪರೇಷನ್ ರೈಸಿಂಗ್ ಲಯನ್” ಕಾರ್ಯಾಚರಣೆಯಡಿಯಲ್ಲಿ ಇರಾನ್‌ದ ಪ್ರಮುಖ ಆರ್ಥಿಕ ಸ್ಥಾವರವಾದ ವಿಶ್ವದ ಅತಿದೊಡ್ಡ ಪ್ರಾಕೃತಿಕ ಅನಿಲ ಕ್ಷೇತ್ರದ ಮೇಲೆ ವಾಯುದಾಳಿ ನಡೆಸಿದೆ. ಇದರ ಪರಿಣಾಮವಾಗಿ ಇರಾನ್‌ಗೆ ಗಂಭೀರ ಹಾನಿಯಾಗಿದೆ ಎಂದು ಅಂದಾಜು.
ಇದೇ ಸಂದರ್ಭದಲ್ಲಿ, ಇಸ್ರೇಲ್ ಟೆಹ್ರಾನ್‌ನ ಜನನಿಬಿಡ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಈ ದಾಳಿಯಲ್ಲಿ 29 ಮಕ್ಕಳು ಸೇರಿ ಒಟ್ಟು 60 ಜನರು ಮೃತಪಟ್ಟಿದ್ದಾರೆ. ಇದಕ್ಕೂ ಮುಂಚೆ ನಡೆದ ಪ್ರತ್ಯೇಕ ದಾಳಿಯಲ್ಲಿ 3 ಮಹಿಳೆಯರು ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ಮೊದಲ ಎರಡು ದಿನಗಳಲ್ಲಿ ಸುಮಾರು 78 ಜನರು ಬಲಿಯಾಗಿದ್ದಾರೆ. ದಾಳಿಯಿಂದ ಕಟ್ಟಡಗಳು ನೆಲಸಮವಾಗಿದ್ದು, ಮೇಲ್ಮಹಡಿಗಳು ಉರುಳಿ ಬೀದಿಗಳನ್ನು ಮುಚ್ಚಿವೆ.
ಇರಾನ್ ತನ್ನ ಪ್ರತಿಕ್ರಿಯೆಯಲ್ಲಿ ಇಸ್ರೇಲ್‌ದ ನಗರಗಳ ಮೇಲೆ 200 ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿದೆ. ಇಸ್ರೇಲ್ ತನ್ನ ದಾಳಿಗಳನ್ನು ಮುಂದುವರಿಸಿದರೆ, ಇರಾನ್‌ನ ಪ್ರತಿಕ್ರಿಯೆ “ಹೆಚ್ಚು ತೀವ್ರ” ಆಗಿರುತ್ತದೆ ಮತ್ತು ಇಸ್ರೇಲ್‌ನ ಮಿತ್ರರಾಷ್ಟ್ರಗಳ ಮಿಲಿಟರಿ ನೆಲೆಗಳನ್ನು ಸಹ ಗುರಿಯಾಗಿಸಬಹುದು ಎಂದು ಟೆಹ್ರಾನ್ ಎಚ್ಚರಿಕೆ ನೀಡಿದೆ.
ಸಂಘರ್ಷವು ಮತ್ತಷ್ಟು ವಿಸ್ತರಿಸುವ ಅಪಾಯವಿದ್ದು, ಪ್ರಪಂಚದಾದ್ಯಂತದ ರಾಷ್ಟ್ರಗಳು ಶಾಂತಿ ಸ್ಥಾಪನೆಗೆ ಕರೆ ನೀಡಿವೆ.