
ಹಿರಿಯಡಕ ತಂಡದ ಸದಸ್ಯರು ಮತ್ತು ಶ್ರೀದೇವಿ ಫ್ರೆಂಡ್ಸ್ ಗುಡ್ಡೆಯಂಗಡಿ ಸದಸ್ಯರು ದಿನಾಂಕ 02-03-2025ರಂದು ಕೊಂಡಾಡಿ ಶಾಲಾ ಮೈದಾನದಲ್ಲಿ ಒಂದು ಕ್ರಿಕೆಟ್ ಪಂದ್ಯಾಕೂಟವನ್ನು ಅತ್ಯಂತ ಶಿಸ್ತುಬದ್ಧವಾಗಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ, ಪಂದ್ಯಾಕೂಟದ ಆಯೋಜಕರ ಪರವಾಗಿ ಐದು ಸಿ.ಸಿ. ಕ್ಯಾಮೆರಾಗಳು ಮತ್ತು ಅವುಗಳ ಸಂಪೂರ್ಣ ವ್ಯವಸ್ಥೆ ನಿರ್ವಹಣೆಯ ಸಾಧನಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಲಾಗಿದೆ.
ಶಾಲೆಯ ಸುರಕ್ಷತೆ ಮತ್ತು ವಿದ್ಯಾರ್ಥಿಗಳ ಒಳಿತನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಉದಾರ ಕೊಡುಗೆಯನ್ನು ನೀಡಿದ ತಂಡದ ಎಲ್ಲಾ ಸದಸ್ಯರಿಗೂ ಶಾಲೆಯ ಸಿಬ್ಬಂದಿ ವರ್ಗ ಮತ್ತು ಹಳೆ ವಿದ್ಯಾರ್ಥಿಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಲಾಗಿದೆ.
ವಿಘ್ನೇಶ್ ಸೋನು
ಶ್ರೀದೇವಿ ಫ್ರೆಂಡ್ಸ್ ಗುಡ್ಡೆಯಂಗಡಿ