
ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಲಡ್ಡು ವಿತರಣಾ ಕೌಂಟರ್ ಸಂಖ್ಯೆ 47 ರಲ್ಲಿ ಬೆಂಕಿ ಉಂಟಾಗಿ ಭಕ್ತರಲ್ಲಿ ಆತಂಕದ ವಾತಾವರಣ ಉಂಟಾಯಿತು. ಈ ಘಟನೆ ಯು ಪಿ ಎಸ್ ವ್ಯವಸ್ಥೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ್ದಾಗಿದೆಯೆಂದು ತಿಳಿದು ಬಂದಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ, ಲಡ್ಡು ಪಡೆದುಕೊಳ್ಳಲು ಕಾಯುತ್ತಿದ್ದ ಭಕ್ತರು ಭಯದಿಂದ ಸ್ಥಳದಿಂದ ಓಡಿದ್ದು ದೇವಾಲಯದ ಸಿಬ್ಬಂದಿ ತಕ್ಷಣವೇ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಬೆಂಕಿಯನ್ನು ನಂದಿಸಿದರು ಮತ್ತು ಹೆಚ್ಚಿನ ಹಾನಿ ತಡೆಯುವಲ್ಲಿ ಯಶಸ್ವಿಯಾದರು.
ಘಟನೆಯಲ್ಲಿ ಯಾವುದೇ ಗಾಯಗಳ ಮಾಹಿತಿಯಿಲ್ಲವಾದರೂ, ಇದು ಭಕ್ತರಲ್ಲಿ ಭಯ ಹುಟ್ಟಿಸಿದ್ದು ಮತ್ತು ದೇವಾಲಯದ ಭದ್ರತಾ ವ್ಯವಸ್ಥೆಗಳನ್ನು ಸುಧಾರಿಸುವ ಅಗತ್ಯವಿದೆ ಎಂಬ ಪ್ರಶ್ನೆಗಳನ್ನು ಎಬ್ಬಿಸಿದೆ. ದೇವಾಲಯದ ಅಧಿಕಾರಿಗಳು ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.