ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಹೊಸ ವರ್ಷದ ದಿನದಂದು ನಡೆದ ಭೀಕರ ಘಟನೆಯೊಂದು ಜನರ ಮನಸ್ಸಿಗೆ ಮಸಿ ಬಳಿದಿದೆ. ತಮ್ಮ ಮಕ್ಕಳನ್ನು ಮಲಗಿಸಲು ಅಣ್ಣ ಮತ್ತು ತಂಗಿಯ ನಡುವಿನ ಜಗಳ ಅಂತಿಮವಾಗಿ ರಕ್ತಪಾತಕ್ಕೆ ಕಾರಣವಾಯಿತು. ಈ ಘಟನೆಯಲ್ಲಿ, ಸೈಯದ್ ಫರ್ಮಾನ್ (30) ಎಂಬ ವ್ಯಕ್ತಿ ತನ್ನ ತಂಗಿ ಐಮನ್ ಭಾನು (23) ಳನ್ನು ಚಾಕುವಿನಿಂದ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಮಗುವನ್ನು ಮಲಗಿಸಲು ಜಗಳ
ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವೊಂದು ‘ನನಗೆ ನಿದ್ದೆ ಬರುತ್ತಿದೆ’ ಎಂದು ಹೇಳಿ ಮಲಗುವ ಕೋಣೆಗೆ ಹೋಗುತ್ತಿದಾಗ ಆರೋಪಿ ಸೈಯದ್ , ‘ನೀನು ನಿದ್ದೆ ಮಾಡುವಂತಿಲ್ಲ, ನಾನು ಊಟ ಮುಗಿಸುವವರೆಗೆ ಕಾಯಬೇಕು’ ಎಂದು ಬಲವಂತ ಪಡಿಸಿದ ಹಠ ಹಿಡಿದು, ಕಿರುಚಾಡಿ, ಮಗುವಿಗೆ ಸೌತೆಕಾಯಿ ತಿನ್ನಿಸುತ್ತಿದ್ದ ಎನ್ನಲಾಗಿದೆ.
ಅವರ ಸಹೋದರಿ ಐಮಾನ್ ಬಾನು ಮಧ್ಯಪ್ರವೇಶಿಸಿದರು. “ಅಣ್ಣ, ಮಗುವಿಗೆ ಈಗ ಜ್ವರ ಮತ್ತು ನೆಗಡಿ ಇದೆ, ಸೌತೆಕಾಯಿ ತಿನ್ನಿಸುವುದು, ಬೇಡ ಮಗು ಮಲಗಲಿ ಬಿಡು” ಎಂದು ಮನವಿ ಮಾಡಿದರು.
ಇದರಿಂದ ಕೋಪಿತಗೊಂಡ ಸೈಯದ್ ತನ್ನ ಸಹೋದರಿಯೊಂದಿಗೆ ಜಗಳವಾಡಿ ಅವಾಚ್ಯ ಶಬ್ದಗಳಿಂದ ಆಕೆಯನ್ನು ಬೈದಿದ್ದಾನೆ. ಸಿಟ್ಟಿನ ಭರದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ವರದಿಯಾಗಿದೆ.
ಕ್ರೂರ ಹತ್ಯೆ
ಕೋಪದಿಂದ ಅಡುಗೆ ಕೋಣೆಗೆ ಚಾಕು ತಂದು ತಂಗಿಯ ಕುತ್ತಿಗೆಗೆ ಇರಿದಿದ್ದಾನೆ. ಜಗಳ ಬಿಡಿಸಲು ಬಂದಿದ್ದ ಅತ್ತಿಗೆ ತಾಸೀಂ ತಾಜ್ ಅವರ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಆಕೆಯ ಕಿವಿ ಕತ್ತರಿಸಿ ಕಾಲು ಒತ್ತಿದ ಪರಿಣಾಮ ಗಂಭೀರ ಗಾಯಗಳಾಗಿವೆ. ಇದೇ ವೇಳೆ ತಂದೆ ಸೈಯದ್ ಪಾಷಾ ಜಗಳ ಬಿಡಿಸಲು ಮುಂದಾದಾಗ ಎಡಗೈ ಮುರಿದು ಚಾಕುವಿನಿಂದ ಗಾಯಗೊಳಿಸಿದ್ದಾನೆ.
ನೆರೆಹೊರೆಯವರ ಸಹಾಯ
ಕಿರುಚಾಟ ಕೇಳಿ ಅಕ್ಕಪಕ್ಕದ ಮನೆಯವರು ಬಾಗಿಲು ಒಡೆದು ಒಳ ಬಂದು ಸೈಯದ್ ಫರ್ಮಾನ್‌ಗೆ ಬೀಗ ಹಾಕಿದರು. ಗಾಯಾಳುಗಳನ್ನು ಕೂಡಲೇ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಐಮಾನ್ ಭಾನು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಗಂಭೀರವಾಗಿ ಗಾಯಗೊಂಡ ತಾಸೀಂ ತಾಜ್ ಮತ್ತು ಸೈಯದ್ ಪಾಷಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸಾರ್ವಜನಿಕ ಆಕ್ರೋಶ ಮತ್ತು ಪೊಲೀಸ್ ತನಿಖೆ
ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಆಸ್ಪತ್ರೆ ಎದುರು ಸಾವಿರಾರು ಜನ ಜಮಾಯಿಸಿದ್ದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿದೆ.
ಘಟನೆ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಮುಂದಿನ ಕಾನೂನು ಕ್ರಮಕ್ಕೆ ಕ್ರಮ ಕೈಗೊಳ್ಳಲಾಗಿದೆ.