
ಉಡುಪಿ ಜಿಲ್ಲೆಯ ಮರವಂತೆ ಬೀಚ್ ಬಳಿ ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎ ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಐದು ಮಂದಿಯನ್ನು ಸೆನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಭಟ್ಕಳ ನಿವಾಸಿಗಳಾದ ಅಬ್ರಾರ್ ಶೇಖ್ (22), ಮೊಹಮ್ಮದ್ ಇಸ್ಮಾಯಿಲ್ ಫರ್ಹಾನ್ (25), ಮೊಹಮ್ಮದ್ ಜಿಯಾಮ್ ಬೆಳ್ಳಿ (26), ನೌಮಾನ್ (27) ಹಾಗೂ ಹೊನ್ನಾವರದ ಸಜ್ಜಾದ್ ಮುಸ್ತಕೀಮ್ ಕೆವಾಕ (21) ಎಂದು ಗುರುತಿಸಲಾಗಿದೆ. ಈ ದಾಳಿಯಲ್ಲಿ 15.59 ಗ್ರಾಂ ಎಂಡಿಎಂಎ ಪೌಡರ್, ಐದು ಮೊಬೈಲ್‌ಗಳು, ಮತ್ತು ಆರೋಪಿಗಳು ಬಳಸಿದ ಕಾರು ಸೇರಿದಂತೆ ಒಟ್ಟು ₹11,28,000 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿ ಅಬ್ರಾರ್ ಶೇಖ್, ಎಂಡಿಎಂಎ ಪೌಡರ್‌ನ್ನು ಬೆಂಗಳೂರಿನ ದಾವೂದ್ ಮತ್ತು ಇಸಾಕ್ ಎಂಬವರಿಂದ ಖರೀದಿಸಿದ್ದಾಗಿ ಮಾಹಿತಿ ನೀಡಿದ್ದು, ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.