
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದ ಖತರ್ನಾಕ್ ಕಳ್ಳರ ತಂಡ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೊರಗಿನಿಂದ ನೋಡಲು ಪೆಟ್ರೋಲ್ ಟ್ಯಾಂಕರ್ ರೀತಿಯಲ್ಲೇ ಕಾಣುವ ವಾಹನ ಆದರೆ ಅಸಲಿಗೆ ಇದು ಪೆಟ್ರೋಲ್ ಟ್ಯಾಂಕರ್ ಅಲ್ಲವೇ ಅಲ್ಲ ಬದಲಿಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲು ಖತರ್ನಾಕ್ ಕಳ್ಳರು ರೆಡಿ ಮಾಡಿದ ವಾಹನ.
ಇತ್ತೀಚಿಗೆ ನವೆಂಬರ್ 11 ರಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಜಮ್ಮು ಕಾಶ್ಮೀರದ ನೋಂದಣಿ ಹೊಂದಿರುವ ವಾಹನ ನೋಡಲು ಪೆಟ್ರೋಲ್ ಟ್ಯಾಂಕರ್ ರೀತಿ ಕಾಣುತ್ತಿದ್ದು ಪೊಲೀಸರು ಬಂದು ಪರಿಶೀಲನೆ ನಡೆಸಿದಾಗಲೇ ಗೊತ್ತು ಇದು ಟ್ಯಾಂಕರ್ ಅಲ್ಲ ಬದಲಿಗೆ ಗೋವುಗಳನ್ನು ಅಕ್ರಮವಾಗಿ ಸಾಗಿಸಲು ಮಾಡಿದ ವಾಹನ ಎಂಬುದು ಇದನ್ನು ಕಂಡ ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ.