
ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಡಿಸೆಂಬರ್ 12ರಂದು ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ 85% ಮತದಾನವಾಗಿದೆ. ಒಟ್ಟು 1018 ಮತದಾರರ ಪೈಕಿ 864 ಮಂದಿ ಮತಚಲಾಯಿಸಿದರು.
ಬಿಜೆಪಿ ಬೆಂಬಲಿತ 12 ಮಂದಿ ಸ್ಪರ್ಧಕರು ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಉದಯ ಕುಮಾರ್ ಹೆಗ್ಡೆ (545), ಕಿಶನ್ (504), ಎನ್. ರವೀಂದ್ರ ನಾಯಕ್ (472), ವಿನಯ ಕುಮಾರ್ ಶೆಟ್ಟಿ (497), ಎನ್. ವಿವೇಕಾನಂದ ಶೆಟ್ಟಿ (448), ಮತ್ತು ಸುರೇಶ್ ಶೆಟ್ಟಿ (458) ಗೆಲುವು ಸಾಧಿಸಿದರು.
ಮಹಿಳಾ ಮೀಸಲು ಸ್ಥಾನದಲ್ಲಿ ವಿನೋದ ಪೂಜಾರ್ತಿ (430) ಮತ್ತು ಶಾಂತ (407) ಆಯ್ಕೆಯಾಗಿದ್ದು, ಹಿಂದುಳಿದ ಪ್ರವರ್ಗ ‘ಎ’ ಯಿಂದ ದೇವೇಂದ್ರ ನಾಯಕ್ (425), ‘ಬಿ’ ಯಿಂದ ಶಾಂತರಾಮ ಶೆಟ್ಟಿ (460), ಪರಿಶಿಷ್ಟ ಜಾತಿಯಿಂದ ಎನ್. ಬಿ. ಬಾಬು (486) ಮತ್ತು ಪರಿಶಿಷ್ಟ ಪಂಗಡದಿಂದ ಶಂಕರ ನಾಯ್ಕ್ (473) ಗೆಲುವು ಸಾಧಿಸಿದ್ದಾರೆ.
ಒಟ್ಟು 12 ಸ್ಥಾನಗಳಿಗೆ 30 ಮಂದಿ ಸ್ಪರ್ಧಿಸಿದ್ದರು. ಈ ಚುನಾವಣೆ ಸಂಯುಕ್ತ ಸಹಕಾರ ಉಪನಿಬಂಧಕರ ಕಚೇರಿಯ ಸಹಕಾರಿ ಅಭಿವೃದ್ದಿ ಅಧಿಕಾರಿ ಜಯಂತಿಯವರ ಮಾರ್ಗದರ್ಶನದಲ್ಲಿ ನಡೆದಿತ್ತು.
ಶಾಸಕ ಸುನಿಲ್ ಕುಮಾರ್ ಗೆದ್ದ ಅಭ್ಯರ್ಥಿಗಳನ್ನು ಭೇಟಿ ಮಾಡಿ ಅವರಿಗೆ ಅಭಿನಂದನೆ ಸಲ್ಲಿಸಿದರು.