
ಬ್ಯಾಂಕ್ ಖಾತೆದಾರರಿಗೆ ಎಟಿಎಂ ಬಳಕೆಯಲ್ಲಿ ಮುಖ್ಯ ಬದಲಾವಣೆ ಕಾಣಲಿದೆ. ಇಂದಿನಿಂದ, ನಿಗದಿತ ಮಿತಿಗಿಂತ ಹೆಚ್ಚು ಬಾರಿ ಎಟಿಎಂನಿಂದ ಹಣ ತೆಗೆದರೆ, ಪ್ರತಿ ವಹಿವಾಟಿಗೆ 21ರೂಪಾಯಿಗೆ ಬದಲಾಗಿ 23 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.
ಉಚಿತ ವಹಿವಾಟು ಮಿತಿ:
- ಸ್ವಂತ ಬ್ಯಾಂಕ್ ಎಟಿಎಂ: ಮಾಸಿಕ 5 ಬಾರಿ ಉಚಿತ.
- ಇತರ ಬ್ಯಾಂಕ್ ಎಟಿಎಂ:
- ಮೆಟ್ರೋ ನಗರಗಳಲ್ಲಿ – ಮಾಸಿಕ 3 ಬಾರಿ ಉಚಿತ.
- ಮೆಟ್ರೋಯೇತರ ಪ್ರದೇಶಗಳಲ್ಲಿ – ಮಾಸಿಕ 5 ಬಾರಿ ಉಚಿತ.
ಮಿತಿ ಮೀರಿದ ಪ್ರತಿ ವಹಿವಾಟಿಗೂ ಹೆಚ್ಚುವರಿ ಶುಲ್ಕ ವಸೂಲಿ ಆಗುವುದರಿಂದ, ಬಳಕೆದಾರರು ತಮ್ಮ ಎಟಿಎಂ ಬಳಕೆಯನ್ನು ಯೋಜನಾಬದ್ಧವಾಗಿ ಮಾಡಿಕೊಳ್ಳುವುದು ಅಗತ್ಯ. ಈ ಹೊಸ ನಿಯಮಗಳು ದೇಶದ ಎಲ್ಲಾ ಬ್ಯಾಂಕ್‌ಗಳಿಗೂ ಅನ್ವಯವಾಗುತ್ತವೆ.
ಸೂಚನೆ: ನಿಮ್ಮ ಬ್ಯಾಂಕ್ ಮಿತಿಗಳನ್ನು ತಪಾಸಿಸಿ, ಅನಗತ್ಯ ಶುಲ್ಕ ತಪ್ಪಿಸಲು ಎಟಿಎಂ ಬಳಕೆಯನ್ನು ಉಚಿತ ಮಿತಿಯೊಳಗೇ ಇರಿಸಿಕೊಳ್ಳಿ.



































