
ಅಮೇರಿಕದ ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈಮಾನಿಕ ದೃಶ್ಯದ ವಿಡಿಯೋ ನಕಲಿ ಎಂದು ಪಿಟಿಐ ಫ್ಯಾಕ್ಟ್‌ಚೆಕ್ ವರದಿ ಹೇಳಿದೆ.
ಈ ವಿಡಿಯೋ ತುಣುಕು ರಸ್ತೆಯ ಹಿಂಭಾಗದಲ್ಲಿ ಬೆಟ್ಟ ಧಗಧಗನೆ ಉರಿಯುತ್ತಿರುವಂತೆ ತೋರಿಸುವ ದೃಶ್ಯ ಹೊಂದಿದ್ದು, ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಹೆಚ್ಚು ಪ್ರಚಾರಗೊಂಡಿದೆ.
ಪರಿಶೀಲನೆ ವೇಳೆ, “ಇನ್‌ವಿಡ್” ಮತ್ತು “ಹೈವ್ ಮಾಡರೇಷನ್” ಎಐ ಪತ್ತೆ ಟೂಲ್‌ಗಳ ನೆರವಿನಿಂದ ವಿಡಿಯೋ ನಕಲಿ ಎಂಬುದು ದೃಢಪಟ್ಟಿದೆ. ಇದು ಎಐ ತಂತ್ರಜ್ಞಾನದಲ್ಲಿ ಸೃಷ್ಟಿಸಿದ ಡೀಪ್ ಫೇಕ್ ಕ್ಲಿಪ್‌ಗಳ ಸಮೂಹದಿಂದ ತಯಾರಿಸಲಾಗಿರುವ ದೃಶ್ಯವಾಗಿದೆ.
ಹಾಗಾಗಿ, ಲಾಸ್ ಏಂಜಲೀಸ್‌ನಲ್ಲಿ ಇಂತಹ ಘಟನೆ ನಿಜವಾಗಿಯೂ ನಡೆದಿಲ್ಲ ಎಂದು ಸ್ಪಷ್ಟವಾಗಿದೆ.