
ಕೊಲ್ಲಂ ಓಚ್ಚಿರ ಪುದುಪಳ್ಳಿಯಲ್ಲಿ ಮೀನು ಹಿಡಿಯುವ ಸಮಯದಲ್ಲಿ ಒಂದು ದಾರುಣ ಘಟನೆ ನಡೆದಿದೆ. ಈ ಘಟನೆಯಲ್ಲಿ 26 ವರ್ಷದ ಆದರ್ಶ್ ಯಾನೆ ಉಣ್ಣಿ ಎಂಬ ಯುವಕ ಮೃತಪಟ್ಟಿದ್ದಾನೆ. ಈ ಘಟನೆ ಆದಿತ್ಯವಾರ ಸಾಯಂಕಾಲ ನಡೆದಿದೆ.
ಘಟನೆಯ ವಿವರಗಳ ಪ್ರಕಾರ, ಕಿಶೋರ್ ಎಂಬಾತನ ಮನೆಯ ಬಳಿಯಿರುವ ಕೆರೆಯ ನೀರನ್ನು ಬತ್ತಿಸಿ ಮೀನು ಹಿಡಿಯುತ್ತಿದ್ದ ಆದರ್ಶ್, ಮೊದಲು ಸಿಕ್ಕಿದ ಮೀನನ್ನು ಬಾಯಿಯಲ್ಲಿ ಕಚ್ಚಿ ಹಿಡಿದುಕೊಂಡು, ಇನ್ನೊಂದು ಮೀನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ, ಬಾಯಿಯಲ್ಲಿದ್ದ ಮೀನು ಗಂಟಲಲ್ಲಿ ಸಿಲುಕಿಕೊಂಡಿತು. ಇದರಿಂದಾಗಿ ಅವನು ಉಸಿರಾಡಲು ಅಸಮರ್ಥನಾದನು. ಜತೆಗಿದ್ದವರು ಅವನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ಆ ಸಮಯದಲ್ಲಿ ಆದರ್ಶ್ ಮೃತಪಟ್ಟಿದ್ದರು.