

ಕಾರ್ಕಳ ತಾಲೂಕು ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಎಲ್ಲಾ ವಿಪ್ರ ಬಾಂಧವರು ಮತ್ತು ವಿಪ್ರ ಮಹಿಳೆಯರು ಸೇರಿ 20 /12/24 ತಾರೀಕು ಶುಕ್ರವಾರ ಸಾಯಂಕಾಲ 5:30 ರಿಂದ 6:30ರ ವರೆಗೆ ಕಲ್ಮಠ ಶ್ರೀ ಸೂರ್ಯನಾರಾಯಣ ಮಠದಲ್ಲಿ ಗಾಯತ್ರಿ ಜಪ ಮತ್ತು ಶ್ರೀ ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಕೆ ಶರಣ್ಯೇ ತ್ರಯಂಬಕೆ ಗೌರಿ ನಾರಾಯಣಿ ನಮಸ್ತುತೆ ಜಪ ನಡೆಯಿತು.10000 ಗಾಯತ್ರಿ ಜಪ ಮತ್ತು 25,000 ಶ್ರೀ ದೇವಿಯ ಮಂತ್ರದ ಜಪವನ್ನು ದೇವರಿಗೆ ಸಮರ್ಪಿಸಲಾಯಿತು. ಎಲ್ಲರಿಗೂ ಸೂರ್ಯನಾರಾಯಣ ದೇವರು ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ಬಂದು ಸಹಕರಿಸಿದ ಎಲ್ಲರಿಗೂ ಮಠದ ವ್ಯವಸ್ಥಾಪಕರಿಗೂ ಅನಂತಾನಂತ ಧನ್ಯವಾದಗಳು. -ಕಾರ್ಕಳಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷರು ಮತ್ತು ಸದಸ್ಯರು