
ಗೂಗಲ್ ತನ್ನ ಹೊಸ ಪಿಕ್ಸೆಲ್ 10 ಸರಣಿಯಲ್ಲಿ ಕ್ರಾಂತಿಕಾರಿ ತಂತ್ರಜ್ಞಾನವೊಂದನ್ನು ಪರಿಚಯಿಸಿದೆ. ಈ ವೈಶಿಷ್ಟ್ಯದ ಮೂಲಕ ಫೋನ್‌ನಲ್ಲಿ ನೆಟ್‌ವರ್ಕ್ ಸಿಗ್ನಲ್ ಇಲ್ಲದಿದ್ದರೂ ಸಹ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಈ ತಿಂಗಳ 20ರಂದು ನಡೆದ ಮೇಡ್ ಬೈ ಗೂಗಲ್
ಕಾರ್ಯಕ್ರಮದಲ್ಲಿ ಪಿಕ್ಸೆಲ್ 10 ಸರಣಿಯನ್ನು ಅನಾವರಣಗೊಳಿಸಲಾಯಿತು. ಈ ಹೊಸ ತಂತ್ರಜ್ಞಾನವು ಸಿಗ್ನಲ್ ಇಲ್ಲದ ಪ್ರದೇಶಗಳಲ್ಲಿಯೂ ಕೂಡ ವಾಟ್ಸ್‌ಆಯಪ್ ಮೂಲಕ ಧ್ವನಿ ಮತ್ತು ವಿಡಿಯೋ ಕರೆಗಳನ್ನು ಮಾಡಲು ಅವಕಾಶ ನೀಡಲಿದೆ. ಈ ವೈಶಿಷ್ಟ್ಯವನ್ನು ಹೊಂದಿದ ಮೊದಲ ಫೋನ್ ಎಂಬ ಹೆಗ್ಗಳಿಕೆ ಪಿಕ್ಸೆಲ್ 10 ಸರಣಿಯದ್ದಾಗಿದೆ.
ಗೂಗಲ್ ಪಿಕ್ಸೆಲ್ 10 ಸರಣಿಯ ಬೆಲೆ
ಗೂಗಲ್ ಪಿಕ್ಸೆಲ್ 10 ಸರಣಿಯ ಆರಂಭಿಕ ಬೆಲೆ ₹79,999. ಈ ಫೋನ್‌ಗಳು ಒಂದೇ ಸ್ಟೋರೇಜ್ ಆಯ್ಕೆಯಲ್ಲಿ ಪೂರ್ವ-ಆರ್ಡರ್‌ಗೆ ಲಭ್ಯವಿದೆ.
- ಗೂಗಲ್ ಪಿಕ್ಸೆಲ್ 10: ₹79,999 (256GB).
- ಗೂಗಲ್ ಪಿಕ್ಸೆಲ್ 10 ಪ್ರೊ: ₹1,09,999 (16GB RAM + 256GB).
- ಗೂಗಲ್ ಪಿಕ್ಸೆಲ್ 10 ಪ್ರೊ ಎಕ್ಸ್‌ಎಲ್: ₹1,24,999 (16GB RAM + 256GB).