
ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಾಟ್ಸಾಪ್ (WhatsApp). ತ್ವರಿತವಾಗಿ ಮೆಸೇಜ್ ಕಳುಹಿಸಲು ಬಳಕೆಯಾಗುವ ವಾಟ್ಸಾಪ್ ಡಿಜಿಟಲ್ ಸಂವಹನದ ಪ್ರಾಥಮಿಕ ಸಾಧನವಾಗಿದೆ
ಇತ್ತೀಚಿನ ದಿನಗಳಲ್ಲಿ ವೃತ್ತಿಪರ ಚಾಟ್‌ಗಳು, ಕೆಲಸದ ಸಂದೇಶಗಳು, ವೈಯಕ್ತಿಕ ಸಂಭಾಷಣೆಗಳು ಮತ್ತು ಫೋಟೋಗಳನ್ನು ವಾಟ್ಸಾಪ್ ನಲ್ಲಿ ಸುರಕ್ಷಿತವಾಗಿರಿಸುವುದು ಅತ್ಯಗತ್ಯ. ಆದರೆ ವಾಟ್ಸಾಪ್ ಚಾಟ್ ಗಳು ಕಳೆದುಹೋದರೆ ಹಲವರು ಸಂಕಷ್ಟ ಪಡುತ್ತಾರೆ. ಅದೃಷ್ಟವಶಾತ್, ಆಂಡ್ರ್ಯಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಅಳಿಸಲಾದ ಚಾಟ್ ಗಳನ್ನು ಮರುಪಡೆಯಲು ಸಾಧ್ಯ.