
ಇಂದಿನ 21ನೇ ಶತಮಾನದ ಹೊಸ್ತಿಲಲ್ಲಿ ಇರುವ ಟೆಕ್ನಾಲಜಿ ಬಳಕೆದಾರರಿಗೆ, ಅದರಲ್ಲೂ ಸೋಷಿಯಲ್ ಮೀಡಿಯಾ ಲವರ್‌ಗಳಿಗೆ ಪ್ರತಿದಿನವೂ ಸಹ ಒಂದಿಲ್ಲೊಂದು ಹೊಸ ಟೆಕ್ ಪ್ರಾಡಕ್ಟ್‌ಗಳು ಕೈಗೆ ಸಿಗುತ್ತಿವೆ. ಅಥವಾ ಇರುವ ತಮ್ಮ ಸೋಷಿಯಲ್ ಖಾತೆಗಳ ಅಪ್ಲಿಕೇಶನ್‌ಗಳೇ ವಿನೂತನ ಅಪ್‌ಡೇಟ್‌ಗಳನ್ನು ನೀಡುವ ಮೂಲಕ ಬಳಕೆದಾರರು ಇನ್ನಷ್ಟು ಇನ್ನಷ್ಟು ಹೆಚ್ಚು ಸಮಯ ಎಂದು ಬಳಕೆ ಮಾಡುವಂತಹ ವೈಶಿಷ್ಟ್ಯಗಳನ್ನು ನೀಡುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಿಗೆ ಸಂಬಂಧಪಟ್ಟಂತೆ ಈ ಹಿಂದಿನ ಬಹುದೊಡ್ಡ ಸುದ್ದಿ ಎಂದರೆ ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್ ಖರೀದಿಸಿ ಅದನ್ನು X.com ಮಾಡಿದ್ದು ಆಗಿತ್ತು. ಈಗ ಇದಕ್ಕಿಂತ ದೊಡ್ಡ ಸುದ್ದಿ ಎಂದರೆ ಈ ಹಿಂದೆ ಟ್ವಿಟ್ಟರ್ ಅನ್ನು ಹುಟ್ಟಿಹಾಕಿದ್ದ ಜಾಕ್ ಡೋರ್ಸೆ, ಈಗ ಮತ್ತೊಂದು ಸೋಷಿಯಲ್ ಬ್ಲಾಗ್ ‘Bluesky’ ಅನ್ನು ಲಾಂಚ್ ಮಾಡಿದ್ದು, ಎಕ್ಸ್ ಖಾತೆಯ ಬಳಕೆದಾರರು ಆತುರಾತುರದಿಂದ, ಬ್ಲೂಸ್ಕೈಗೆ ಪಾಲಾಯನ ಮಾಡುತ್ತಿದ್ದಾರೆ ಎಂಬುದಾಗಿದೆ.
ಎಲಾನ್ ಮಸ್ಕ್‌ನ ಎಕ್ಸ್ ಖಾತೆಯಿಂದ ಜಾಕ್ ಡೋರ್ಸೆ’ಯ ಬ್ಲೂಸ್ಕೈ ಸೋಷಿಯಲ್ ಮೀಡಿಯಾಗೆ ಈಗ ಆತುರಾತುರದಿಂದ ಸೋಷಿಯನ್ ಮೀಡಿಯಾ ಗೀಕ್‌ಗಳು ಪಾಲಾಯನ ಮಾಡುತ್ತಿದ್ದು, ಈಗಾಗಲೇ ಬರೋಬರಿ 16 ಮಿಲಿಯನ್ ಗೂ ಹೆಚ್ಚು ಬಳಕೆದಾರರು ಸೈನ್‌ಪ್ ಆಗುವ ಮೂಲಕ ಖಾತೆ ತೆರೆದಿದ್ದಾರೆ.