ದೇಶಾದ್ಯಂತ ಪ್ರತಿದಿನ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆ ಎಸಗುತ್ತಿರುವ ಪ್ರಕರಣ ವರದಿಯಾಗುತ್ತಿರುವ ನಡುವೆಯೇ ರಾಜಧಾನಿ ರೋಹಿಣಿ ಸೆಕ್ಟರ್ 10ರ ನಿವಾಸಿ, ನಿವೃತ್ತ ಇಂಜಿನಿಯರ್ ಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹತ್ತು ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿರುವ ಘಟನೆ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
72 ವರ್ಷದ ಇಂಜಿನಿಯರ್ ಪತ್ನಿ ಜತೆ ರೋಹಿಣಿ ಸೆಕ್ಟರ್ 10ರಲ್ಲಿ ವಾಸವಾಗಿದ್ದರು. ಅವರು ನೀಡಿರುವ ದೂರಿನಂತೆ, ದೆಹಲಿಯ ಸೈಬರ್ ಸೆಲ್ ಪೊಲೀಸರು ನಿಮ್ಮ ಮೇಲೆ ಎಫ್ ಐಆರ್ ದಾಖಲಿಸಲಾಗಿದ್ದು, ಇದರ ಮುಂದುವರಿದ ಭಾಗವಾಗಿ ನಿಮ್ಮನ್ನು ಇಂಟೆಲಿಜೆನ್ಸ್ ಫ್ಯೂಶನ್ ಅಂಡ್ ಸ್ಟ್ರೆಟಜಿಕ್ ಆಪರೇಷನ್ಸ್ ದಳ ವಿಚಾರಣೆಗೆ ಒಳಪಡಿಸಲಿದೆ ಎಂದು ಹೇಳಿ, ಡಿಜಿಟಲ್ ಅರೆಸ್ಟ್ ಆಗಿರುವುದಾಗಿ ತಿಳಿಸಿದ್ದರು.
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Date: