
ಇಂದಿನ ಡಿಜಿಟಲ್ ಯುಗದಲ್ಲಿ ಇಮೇಲ್ ಬಳಕೆ ಅನಿವಾರ್ಯವಾಗಿದೆ. ಗೂಗಲ್‌ನ ಜಿಮೇಲ್ ಈ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಹುತೇಕರು ಜಿಮೇಲ್ ಅನ್ನು ಕೇವಲ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಬಳಸುತ್ತಾರೆ. ಆದರೆ, ಅದರಲ್ಲಿರುವ ಕೆಲವು ರಹಸ್ಯಗಳು ಮತ್ತು ಉಪಯುಕ್ತ ವೈಶಿಷ್ಟ್ಯಗಳ ಬಗ್ಗೆ ತಿಳಿದಿಲ್ಲ. ಇವು ನಮ್ಮ ದೈನಂದಿನ ಕೆಲಸವನ್ನು ಇನ್ನಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿಸುತ್ತವೆ. ಜಿಮೇಲ್‌ನಲ್ಲಿರುವ 5 ಮಹತ್ವದ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ.
- ಇಮೇಲ್ ಶೆಡ್ಯೂಲಿಂಗ್ ವೈಶಿಷ್ಟ್ಯ: ನೀವು ಕಳುಹಿಸಬೇಕಾದ ಇಮೇಲ್ ಅನ್ನು ತಕ್ಷಣ ಕಳುಹಿಸುವ ಬದಲು ಒಂದು ನಿರ್ದಿಷ್ಟ ಸಮಯ ಅಥವಾ ದಿನಾಂಕದಂದು ಕಳುಹಿಸಲು ಈ ವೈಶಿಷ್ಟ್ಯ ಸಹಾಯಕವಾಗಿದೆ. ಉದಾಹರಣೆಗೆ, ನಾಳೆ ಬೆಳಿಗ್ಗೆ ಕಳುಹಿಸಬೇಕಾದ ಇಮೇಲ್ ಅನ್ನು ನೀವು ರಾತ್ರಿ ಬರೆದು ಶೆಡ್ಯೂಲ್ ಮಾಡಬಹುದು. ಹೀಗೆ ಮಾಡುವುದರಿಂದ, ನೀವು ಮರೆತರೂ ಅದು ಸರಿಯಾದ ಸಮಯಕ್ಕೆ ತಲುಪುತ್ತದೆ.
- ಸ್ಮಾರ್ಟ್ ಕಂಪೋಸ್ ವೈಶಿಷ್ಟ್ಯ: ದೀರ್ಘ ಇಮೇಲ್‌ಗಳನ್ನು ಬರೆಯುವುದು ಕೆಲವೊಮ್ಮೆ ಕಷ್ಟವಾಗಬಹುದು. ಈ ಸಮಯದಲ್ಲಿ, ಸ್ಮಾರ್ಟ್ ಕಂಪೋಸ್ ವೈಶಿಷ್ಟ್ಯವು ನಿಮ್ಮ ಬರವಣಿಗೆಯ ಶೈಲಿಯನ್ನು ಅರ್ಥಮಾಡಿಕೊಂಡು ಪದಗಳನ್ನು ಅಥವಾ ಪೂರ್ಣ ವಾಕ್ಯಗಳನ್ನು ಸ್ವಯಂಚಾಲಿತವಾಗಿ ಸೂಚಿಸುತ್ತದೆ. ನೀವು ಕೆಲವೇ ಅಕ್ಷರಗಳನ್ನು ಟೈಪ್ ಮಾಡಿದರೆ, ಅದು ಸಂಪೂರ್ಣ ಪದ ಅಥವಾ ವಾಕ್ಯವನ್ನು ತೋರಿಸುತ್ತದೆ, ಇದು ಬರವಣಿಗೆಯ ವೇಗವನ್ನು ಹೆಚ್ಚಿಸಿ ಸಮಯ ಉಳಿಸುತ್ತದೆ.
- ಗೌಪ್ಯತಾ ವೈಶಿಷ್ಟ್ಯ: ಗೌಪ್ಯ ಅಥವಾ ಪ್ರಮುಖ ದಾಖಲೆಗಳನ್ನು ಇಮೇಲ್ ಮೂಲಕ ಕಳುಹಿಸುವಾಗ ಜಿಮೇಲ್‌ನ ಈ ವೈಶಿಷ್ಟ್ಯವು ಬಹಳ ಉಪಯುಕ್ತವಾಗಿದೆ. ನೀವು ಕಳುಹಿಸುವ ಇಮೇಲ್‌ನ ಅವಧಿ ಮುಗಿಯುವ ದಿನಾಂಕ ಮತ್ತು ಸಮಯವನ್ನು ನೀವೇ ನಿರ್ಧರಿಸಬಹುದು. ನಿಗದಿತ ಸಮಯದ ನಂತರ ಆ ಇಮೇಲ್ ಸ್ವೀಕರಿಸಿದವರ ಇನ್‌ಬಾಕ್ಸ್‌ನಿಂದ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ. ಈ ಇಮೇಲ್ ಅನ್ನು ಫಾರ್ವರ್ಡ್ ಮಾಡುವುದು, ಸ್ಕ್ರೀನ್‌ಶಾಟ್ ತೆಗೆದುಕೊಳ್ಳುವುದು ಅಥವಾ ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ.
- ಆಫ್‌ಲೈನ್ ಮೋಡ್: ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ಸಹ ನಿಮ್ಮ ಇಮೇಲ್‌ಗಳನ್ನು ನೋಡಲು, ಬರೆಯಲು ಮತ್ತು ನಿರ್ವಹಿಸಲು ಆಫ್‌ಲೈನ್ ಮೋಡ್ ಅನುಕೂಲ ಒದಗಿಸುತ್ತದೆ. ನೀವು ಆಫ್‌ಲೈನ್‌ನಲ್ಲಿ ಬರೆದ ಇಮೇಲ್‌ಗಳು ಇಂಟರ್ನೆಟ್ ಸಂಪರ್ಕ ಬಂದ ತಕ್ಷಣ ಸ್ವಯಂಚಾಲಿತವಾಗಿ ಕಳುಹಿಸಲ್ಪಡುತ್ತವೆ. ಇದು ನೆಟ್‌ವರ್ಕ್ ಸಮಸ್ಯೆ ಇರುವ ಸಮಯದಲ್ಲಿ ತುಂಬಾ ಸಹಕಾರಿ.
- ಫಿಲ್ಟರ್ ಮತ್ತು ಲೇಬಲ್: ದಿನಕ್ಕೆ ನೂರಾರು ಇಮೇಲ್‌ಗಳು ಇನ್‌ಬಾಕ್ಸ್‌ಗೆ ಬರುವುದರಿಂದ ಪ್ರಮುಖ ಇಮೇಲ್‌ಗಳನ್ನು ಹುಡುಕುವುದು ಕಷ್ಟವಾಗಬಹುದು. ಫಿಲ್ಟರ್ ಮತ್ತು ಲೇಬಲ್ ವೈಶಿಷ್ಟ್ಯವು ಇದಕ್ಕೆ ಪರಿಹಾರ ನೀಡುತ್ತದೆ. ನಿರ್ದಿಷ್ಟ ವಿಷಯ ಅಥವಾ ಕಳುಹಿಸುವವರ ಆಧಾರದ ಮೇಲೆ ನೀವು ಇಮೇಲ್‌ಗಳನ್ನು ಗುಂಪು ಮಾಡಬಹುದು. ಇದು ನಿಮಗೆ ಬೇಕಾದ ಇಮೇಲ್ ಅನ್ನು ಸುಲಭವಾಗಿ ಮತ್ತು ವೇಗವಾಗಿ ಹುಡುಕಲು ಸಹಾಯ ಮಾಡುತ್ತದೆ. ಈ ವೈಶಿಷ್ಟ್ಯಗಳನ್ನು ಬಳಸಿಕೊಂಡು ನೀವು ಜಿಮೇಲ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಬಹುದು.