ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಪರ್ಕಳ ಇವರ ಪ್ರಾಯೋಜಕತ್ವದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಉಡುಪಿ ಜಿಲ್ಲಾ ಸಹಕಾರ ಭಾರತಿ ಇವರುಗಳ ಸಹಯೋಗದೊಂದಿಗೆ ಸೊಸೈಟಿಯ ರಜತ ವರ್ಷ ಪ್ರಾರಂಭದ ದಿನ ಸ್ಥಾಪನಾ ದಿನಾಂಕ 27 ಜೂನ್ ರಂದು ಪರ್ಕಳ ಪ್ರೌಢ ಶಾಲೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ ಜರಗಿತು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಇಲ್ಲಿಯ ಪ್ರೌಢಶಾಲಾ ವಿಭಾಗದ ನೂತನ ಎನ್‌ಸಿಸಿ ನೇವಲ್ ಘಟಕವನ್ನು ಎನ್ ಸಿ ಸಿ ನೆವೆಲ್ ಕಮಾಂಡರ್ ಶ್ರೀ ಅಶ್ವಿನ್ ಎಂ ರಾವ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಪೆರ್ವಾಜೆ ಸುಂದರ್ ಪುರಾಣಿಕ್ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಆಡಳಿತದ ಆಶ್ರಯದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ತಾಲೂಕು ಮಟ್ಟದಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು.
ಕುದಿಗ್ರಾಮ-82ರಲ್ಲಿ ಶ್ರೀ ಮಹಾಲಿಂಗೇಶ್ವರ ಕೊಂಡಾಡಿ ಬಳಗದ ಆಶ್ರಯದಲ್ಲಿ "ಮೂಜನೇರ್ವದ ಬಲೇ ಕೆಸರ್ ಗೊಬ್ಬುಗ" ಕಾರ್ಯಕ್ರಮವನ್ನು ಜೂನ್ 29ರ ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ದಿ| ಶಾರದಾ ಉಮನಾಥ ಶೆಟ್ಟಿ ಅವರ ಬಾಕ್ಯಾರ್‌ನಲ್ಲಿ ಆಯೋಜಿಸಲಾಗಿದೆ.
ಲೋಕಕಲ್ಯಾಣ, ಧರ್ಮದ ಸ್ಥಾಪನೆ ಮತ್ತು ದುಷ್ಟ ಶಕ್ತಿಗಳ ನಿರ್ಮೂಲನೆಯ ಉದ್ದೇಶದೊಂದಿಗೆ ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪ್ರಾರಂಭವಾಗಿರುವ ದಶಾವತಾರ ಮಂತ್ರ ಹೋಮದ ಸರಣಿಯಲ್ಲಿ, ಇತ್ತೀಚಿಗೆ ಮತ್ತೊಂದು ಹೋಮ ಕಾರ್ಯಕ್ರಮ ಗುರುವಾರ (ಜೂನ್ 26)ರಂದು ನಡೆಯಿತು.