ಯುವ ಸಂಗಮ ಕಾಂತಾವರ (ರಿ) ಹಾಗೂ ಯುವ ಉತ್ಸಾಹಿ ಬಳಗ (ರಿ) ಕೇಮಾರು ಇವರ ಜಂಟಿ ಆಶ್ರಯದಲ್ಲಿ 3ನೇ ವರ್ಷದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಜು.6 ನೇ ಆದಿತ್ಯವಾರ ಕಾಂತಾವರ ಕುಂದಿಲ, ಕಡತ್ರಬೈಲು ನೆರೋಲ್ದ ಬಾಕಿಮಾರು ಗದ್ದೆಯಲ್ಲಿ ಜರುಗಲಿದೆ.
ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಕರ್ನಾಟಕ ಇದರ ಆಶ್ರಯದಲ್ಲಿ ಶಾಂತಿ ಯುವಕ ಮಂಡಲ ಜಾರ್ಕಳ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಮತ್ತು ಹಿಂದೂ ಗ್ರಾಮ ಸಂರಕ್ಷಣಾ ಸಮಿತಿ ಬೈಲೂರು, ವಿಶ್ವಕರ್ಮ ಬ್ರಾಹ್ಮಣ ಸೇವಾ ಸಂಘ ಬೈಲೂರ್,ಹಾಗೂ ಓಂ ಶಕ್ತಿ ಫ್ರೆಂಡ್ಸ್ ನೀರೆ ಕೆರೆ ಪಲ್ಕೆ ಇವರ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು ಇಲ್ಲಿ ಯಶಸ್ವಿಯಾಗಿ ನಡೆಯಿತು.
ಕುಚ್ಚೂರು ಹೆರ್ಗ ವಿಠ್ಠಲ ಶೆಟ್ಟಿ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸ್ನೇಹಲತಾ ಟಿ. ಜಿ. ಯವರು ಮುದ್ರಾಡಿಯ ಎಂ.ಎನ್. ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ಮತ್ತು ವಿವಿಧ ಸಂಘಗಳನ್ನು ದೀಪಬೆಳಗಿ ಉದ್ಘಾಟಿಸಿದರು
ಕ್ರಿಯೇಟಿವ್ ಕಾಲೇಜು ಕಾರ್ಕಳದ ಹೊಸ ಪರಿಕಲ್ಪನೆಯಿಂದ ಹುಟ್ಟಿಕೊಂಡಿರುವ ಕ್ರಿಯೇಟಿವ್ ಸ್ಫೂರ್ತಿ ಮಾತು ಸರಣಿ ಕಾರ್ಯಕ್ರಮದ 9ನೇ ಆವೃತ್ತಿಯ ಕಾರ್ಯಕ್ರಮವು ಕಲಿಯುವುದು ಒಂದು ಹಬ್ಬ- ಸಂಭ್ರಮಿಸೋಣ ಎಂಬ ಶೀರ್ಷಿಕೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಜರುಗಿತು.
ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ಹಿರೇಬೆಟ್ಟು ಗ್ರಾಮದ ಅಂಗಡಿಬೆಟ್ಟು ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಜೂನ್ 26 ರಂದು ಸಂಜೆ 5:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಮೃತ ವ್ಯಕ್ತಿಯನ್ನು ಬೊಮ್ಮು ಜಾನು ಬೊಡೇಕರ್ ಎಂದು ಗುರುತಿಸಲಾಗಿದೆ.