ಮಂಗಳೂರು ಬಜಪೆ ತಾಲೂಕಿನ ಕಿನ್ನಿಪದವಿಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ನಂತರ, ಅದರ ಪ್ರತೀಕಾರವಾಗಿ ಉಡುಪಿಯ ಆತ್ರಾಡಿ ಪ್ರದೇಶದಲ್ಲಿ ಹತ್ಯೆಗೆ ಯತ್ನ ಪ್ರಕರಣ ನಡೆದಿದೆ.
ಜಗದ್ಗುರು ಶ್ರೀಮದಾಚಾರ್ಯರ ಕರಾರ್ಚಿತವಾಗಿ ಶ್ರೀಪಲಿಮಾರುಮಠದ ಪರಂಪರೆಗೆ ದೊರೆತ ಶ್ರೀ ಸೀತಾ ಲಕ್ಷ್ಮಣಾಂಜನೇಯ ಸಮೇತ ಕೋದಂಡಪಾಣಿ ಶ್ರೀರಾಮಚಂದ್ರ ದೇವರಿಗಾಗಿ ಸುವರ್ಣ ಮಂಟಪ ನಿರ್ಮಾಣಕ್ಕೆ ಮಹತ್ವಾಕಾಂಕ್ಷಿ ಯೋಜನೆ ಕೈಗೊಳ್ಳಲಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳದ ಪೆರ್ವಾಜೆ ಪ್ರದೇಶದಲ್ಲಿ ಗಂಗಾ ಪ್ಯಾರಡೈಸ್ ಬಳಿ ನಿನ್ನೆ ರಾತ್ರಿ ಸುಮಾರು 9.15ರ ಸುಮಾರಿಗೆ ಚಿರತೆಯೊಂದು ರಸ್ತೆಯಿಂದ ಕಾಡಿನತ್ತ ಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.
ಕೊಡವೂರು ಗ್ರಾಮದ ಮೂಡುಬೆಟ್ಟು-ಮಧ್ವನಗರದಲ್ಲಿ ಎಲ್ಲರ ಒಗ್ಗೂಡುವಿಕೆಯಿಂದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ನಿರ್ಮಾಣಕ್ಕೆ ನಾಂದಿ ಹಾಡಿರುವುದು ಅತ್ಯಂತ ಸಂತೋಷದ ವಿಚಾರ ಎಂದು ಕೊಡವೂರು ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ಕೆ.ದಿವಾಕರ ಶೆಟ್ಟಿ ತೋಟದಮನೆ ಹೇಳಿದರು.
ಉದ್ಯಮದಲ್ಲಿ ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ಸಮಸ್ಯೆಗಳಿಂದ ಕಂಗೆಟ್ಟ ಉದ್ಯಮಿಯೊಬ್ಬರು ಕಾರಿನೊಳಗೆ ವಿಷ ಸೇವಿಸಿ ನಂತರ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುಃಖದ ಘಟನೆ ಎ.29ರ ಮುಂಜಾನೆ ಕಾರ್ಕಳ ತಾಲೂಕಿನ ನಿಟ್ಟೆ ದೂಪದಕಟ್ಟೆಯಲ್ಲಿ ನಡೆದಿದೆ.